Monday, April 29, 2024
Homeಅಪರಾಧಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಜೀಪ್ ಪಲ್ಟಿ; ತಾಯಿ ಮಗುವಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಜೀಪ್ ಪಲ್ಟಿ; ತಾಯಿ ಮಗುವಿಗೆ ಗಾಯ

spot_img
- Advertisement -
- Advertisement -

ಕಿನ್ನಿಗೋಳಿ: ಮುಲ್ಕಿ ಸಮೀಪದ ಕೊಲ್ನಾಡು ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಜೀಪ್ ಪಲ್ಟಿಯಾಗಿದ್ದು, ಜೀಪ್ ನಲ್ಲಿದ್ದ ತಾಯಿ ಹಾಗೂ ಮಗು ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡವರನ್ನು ದೇರಳಕಟ್ಟೆ ತೌಡುಗೋಳಿ ನಿವಾಸಿಗಳಾದ ವಿನಿಶಾ(24) ಮತ್ತು 6 ವರ್ಷದ ಮಗು.

ಘಟನೆಯ ವಿವರ: ಬೊಲೆರೋ ಜೀಪ್ ದೇರಳಕಟ್ಟೆ ತೌಡುಗೋಳಿಯಿಂದ ಉಡುಪಿ ಕಡೆಗೆ ಹೋಗುತ್ತಿದ್ದು, ಕೊಲ್ನಾಡು ತಲುಪುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗ್ಯಾಸ್ ಪೈಪ್ ಲೈನ್ ಕಾಮಗಾರಿ ನಡೆಸುತ್ತಿದ್ದ ಟ್ರಾಕ್ಟರ್ ಏಕಾಏಕಿ ಅಡ್ಡ ಬಂದಿದೆ ಎನ್ನಲಾಗಿದೆ. ಈ ಸಂದರ್ಭ ಬೊಲೆರೋ ವಾಹನ ಚಾಲಕ ಅಪಘಾತ ತಪ್ಪಿಸಲು ಯತ್ನಿಸಿದ್ದು, ಚಾಲಕನ ನಿಯಂತ್ರಣ ಜೀಪ್ ತಪ್ಪಿ ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಜೀಪ್ ಸಂಪೂರ್ಣ ಹಾನಿಯಾಗಿದ್ದು, ಕೂಡಲೇ ಜೀಪ್ ಒಳಗಿದ್ದ ಮಗು ಹಾಗೂ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪ್ ಚಾಲಕ ವಿಲ್ಸನ್ ರೋಶನ್ ಕೂಡಾ ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

ಜೀಪ್ ಅನ್ನು ಕ್ರೇನ್ ಮೂಲಕ ಸ್ಥಳದಿಂದ ತೆರವುಗೊಳಿಸಲಾಯಿತು.

- Advertisement -
spot_img

Latest News

error: Content is protected !!