Thursday, June 4, 2026
Homeಅಪರಾಧಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೊರಗೆಳೆದು ಹಲ್ಲೆ; ವ್ಯಕ್ತಿಗೆ ಜೀವಬೆದರಿಕೆ

ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೊರಗೆಳೆದು ಹಲ್ಲೆ; ವ್ಯಕ್ತಿಗೆ ಜೀವಬೆದರಿಕೆ

- Advertisement -
- Advertisement -

ಸುಳ್ಯ: ಮುಖ್ಯ ರಸ್ತೆಯ ಕಾಟಿಪಳ್ಳ ಎಂಬಲ್ಲಿ ವ್ಯಕ್ತಿಯೊಬ್ಬರು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಆಟೋವನ್ನು ತಡೆದು ನಿಲ್ಲಿಸಿ ವ್ಯಕ್ತಿಯನ್ನು ಹೊರಗೆಳೆದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಆರೋಪಿಗಳು ಅಜ್ಜಾವರ ಗ್ರಾಮ ಸುಳ್ಯ ನಿವಾಸಿಗಳಾದ ದಿನೇಶ್(45), ಪುರುಷೋತ್ತಮ (32) ಹಾಗೂ ಸನತ್ (25)

ಘಟನೆಯ ವಿವರ: ಹಲ್ಲೆಯ ಕುರಿತು ಅಮರ ಮುನ್ನೂರು ಗ್ರಾಮದ ಸುಳ್ಯ ನಿವಾಸಿ ಅಜಿತ್ (21) ಎಂಬವರು ದೂರು ನೀಡಿದ್ದು, ದೂರಿನಂತೆ ಜಯರಾಮ ಎಂಬುವರು ಬಾಬು ಅವರು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಅಜ್ಜಾವರ-ಸುಳ್ಯ ಮುಖ್ಯ ರಸ್ತೆಯ ಕಾಟಿಪಳ್ಳ ಎಂಬಲ್ಲಿ ತಲುಪಿದಾಗ, ಅಜ್ಜಾವರ ಗ್ರಾಮ ಸುಳ್ಯ ನಿವಾಸಿಗಳಾದ ದಿನೇಶ್, ಪುರುಷೋತ್ತಮ ಹಾಗೂ ಸನತ್ ಎಂಬವರು ಅಜಿತ್ ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಅವರನ್ನು ಆಟೋರಿಕ್ಷಾದಿಂದ ಹೊರಗೆಳೆದು ಹಲ್ಲೆ ನಡೆಸಿದ್ದು, ಆಟೋ ಚಾಲಕ ಜಯರಾಮ್ ಅವರನ್ನು ಹೊಡೆಯುತ್ತಿರುವುದನ್ನು ತಡೆಯಲು ಪ್ರಯತ್ನಿಸಿದಾಗ, ಅವರಿಗೂ ಬೆದರಿಕೆಯನ್ನು ಒಡ್ಡಿದ್ದಾರೆ. ನಂತರದಲ್ಲಿ ಜಯರಾಮ್ ಅವರಿಗೂ ಆರೋಪಿಗಳು ಜೀವಬೆದರಿಕೆ ಒಡ್ಡಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಅಜಿತ್ ಅವರು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂ: 23/2024 ಕಲಂ: 341.323.324, 506 R/W 34 ಐಪಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!