Tuesday, June 9, 2026
Homeಅಪರಾಧಖಾಸಗಿ ವಾರ್ತಾ ವಾಹಿನಿಯೊಂದರ ಸಂಪಾದಕರಿಗೆ ಜೀವ ಬೆದರಿಕೆ ಪ್ರಕರಣ; ಪ್ರಕರಣದ ಆರೋಪಿ ರಾಧಿಕಾ ಕಾಸರಗೋಡು ವಿರುದ್ಧ...

ಖಾಸಗಿ ವಾರ್ತಾ ವಾಹಿನಿಯೊಂದರ ಸಂಪಾದಕರಿಗೆ ಜೀವ ಬೆದರಿಕೆ ಪ್ರಕರಣ; ಪ್ರಕರಣದ ಆರೋಪಿ ರಾಧಿಕಾ ಕಾಸರಗೋಡು ವಿರುದ್ಧ ದೂರು ದಾಖಲು

- Advertisement -
- Advertisement -

ಪುತ್ತೂರು: ಖಾಸಗಿ ವಾರ್ತಾ ವಾಹಿನಿಯೊಂದರ ಸಂಪಾದಕರಿಗೆ ಜೀವ ಬೆದರಿಕೆ ಹಾಕಿ, ಕೊಲೆ ಸಂಚು ರೂಪಿಸಿದ ಬಗ್ಗೆ ಆರೋಪಿ ರಾಧಿಕಾ ಕಾಸರಗೋಡು ಅಲಿಯಾಸ್ ಅನಿತಾ ಕಾಸರಗೋಡು ವಿರುದ್ಧ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತಿಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿದ ಪ್ರಕರಣದಡಿ ಮೂಡಬಿದಿರೆ ಪೋಲೀಸರಿಂದ ಬಂಧನಕ್ಕೊಳಗಾಗಿ ಹಲವಾರು ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿರುವ ಆರೋಪಿ ರಾಧಿಕಾ ಕಾಸರಗೋಡು ಅಲಿಯಾಸ್ ಅನಿತಾ ಕಾಸರಗೋಡು ವಿರುದ್ಧ ಖಾಸಗಿ ವಾರ್ತಾ ವಾಹಿನಿಯೊಂದರ ಸಂಪಾದಕರಿಗೆ ಜೀವ ಬೆದರಿಕೆ ಹಾಕಿ, ಕೊಲೆ ಸಂಚು ರೂಪಿಸಿದ ಬಗ್ಗೆ ಪುತ್ತೂರು ಪೋಲೀಸರಿಗೆ ಸಂಪಾದಕರು ದೂರು ನೀಡಿದ್ದು, ಸದ್ರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರು ಪೋಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!