Thursday, May 9, 2024
Homeಅಪರಾಧರಾಜ್ಯದಲ್ಲಿ ಕೋಳಿ ಅಂಕಕ್ಕೆ ಕಡಿವಾಣ: ಡೈರೆಕ್ಟರ್ ಜನರಲ್ ಆದೇಶ

ರಾಜ್ಯದಲ್ಲಿ ಕೋಳಿ ಅಂಕಕ್ಕೆ ಕಡಿವಾಣ: ಡೈರೆಕ್ಟರ್ ಜನರಲ್ ಆದೇಶ

spot_img
- Advertisement -
- Advertisement -

ರಾಜ್ಯದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕೋಳಿ ಅಂಕ ಜುಜಾಟಕ್ಕೆ ಕಡಿವಾಣ ಹಾಕುವಂತೆ ಕರ್ನಾಟಕ ಸರಕಾರ ಪೊಲೀಸ್ ಇಲಾಖೆಯ ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಛೇರಿಯಿಂದ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ಅಧೀಕ್ಷರಿಗೆ ಪ್ರಕಟಣೆಯನ್ನು ಹೊರಡಿಸಿದೆ.

ಪ್ರಕಟಣೆಯಲ್ಲಿ ತಿಳಿಸಿರುವಂತೆ ರಾಜ್ಯದಲ್ಲಿ ಕೋಳಿ ಅಂಕಗಳು ಹಗಲಿರುಳು ಎನ್ನದೇ ನಡೆಯುತ್ತಿದ್ದು, ಇದು Prevention of Cruelty to Animal Act-1960ರ ಕಲಂ 11 ಪ್ರಕಾರ ಅಪರಾಧವಾಗಿರುವುರಿಂದ Prevention of Cruelty to Animal Act-1960ನ್ನು ಕಡ್ಡಾಯವಾಗಿ ಪಾಲಿಸುವ ಮತ್ತು ಅನುಷ್ಠಾನಕ್ಕೆ ತರಬೇಕೆಂದು/ ಉಲ್ಲೇಖಿತ ಪತ್ರದಲ್ಲಿ ಕೋರಲಾಗುತ್ತಿದೆ. ಈ ಅಂಶಗಳನ್ನು ನಿಯಮಾನುಸಾರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!