Wednesday, June 3, 2026
HomeUncategorizedಬಹರೈನ್ ನಲ್ಲಿ ಸುಳ್ಯ ಮೂಲದ ಕುಟುಂಬಕ್ಕೆ ಕಾರು ಅಪಘಾತ; ಘಟನೆಯಲ್ಲಿ ಮಗು ಮೃತ್ಯು

ಬಹರೈನ್ ನಲ್ಲಿ ಸುಳ್ಯ ಮೂಲದ ಕುಟುಂಬಕ್ಕೆ ಕಾರು ಅಪಘಾತ; ಘಟನೆಯಲ್ಲಿ ಮಗು ಮೃತ್ಯು

- Advertisement -
- Advertisement -

ಸುಳ್ಯ: ಬಹರೈನ್ ನಲ್ಲಿ ನಡೆದ ಸುಳ್ಯ ಮೂಲದ ಕುಟುಂಬವೊಂದು ಕಾರು ಅಪಘಾತಕ್ಕೆ ಒಳಗಾಗಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ ಮಗು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ.

ಕಾರು ಅಪಘಾತದಲ್ಲಿ ಮೃತಪಟ್ಟ ಬಾಲಕ ಸುಳ್ಯ ಮೂಲದ ದೇವಚಳ್ಳ ಗ್ರಾಮದ ಎಲಿಮಲೆ ಮೆತ್ತಡ್ಕ ನಿವಾಸಿ ಅಶ್ರಫ್ ಮೆತ್ತಡ್ಕ ಅವರ ಪುತ್ರ ಅಯಾನ್ ಅಬ್ದುಲ್ಲಾ(3 ವರ್ಷ) ಎಂದು ಗುರುತಿಸಲಾಗಿದೆ.

ಅಶ್ರಫ್ ಮೆತ್ತಡ್ಕ ದಂಪತಿಗಳು ಮಗುವಿನೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಅಶ್ರಫ್ ಮತ್ತು ಅವರ ಪತ್ನಿಯು ಬಹರೈನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!