Wednesday, June 3, 2026
Homeಅಪರಾಧಮಂಗಲಪದವು ಜಂಕ್ಷನ್‌ನಲ್ಲಿ ಅಕ್ರಮವಾಗಿ ಕಡಿದ ಪುರಾತನ ದೇವದಾರು ಮರ; ಆರೋಪಿ ವಿರುದ್ಧ FIR ದಾಖಲು

ಮಂಗಲಪದವು ಜಂಕ್ಷನ್‌ನಲ್ಲಿ ಅಕ್ರಮವಾಗಿ ಕಡಿದ ಪುರಾತನ ದೇವದಾರು ಮರ; ಆರೋಪಿ ವಿರುದ್ಧ FIR ದಾಖಲು

- Advertisement -
- Advertisement -

ವೀರಕಂಬ: ಇಲ್ಲಿನ ಮಂಗಲಪದವು ಜಂಕ್ಷನ್‌ನ ಬಳಿಯಲ್ಲಿದ್ದ ಪುರಾತನ ದೇವದಾರು ಮರವನ್ನು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ FIR ದಾಖಲಾಗಿದೆ.

ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಂಗಿಲಪದವು ಎಂಬಲ್ಲಿ ಅಕ್ರಮವಾಗಿ ಒಂದು ದೇವದಾರು ಜಾತಿಯ ಮರದ ತುದಿಗೆಲ್ಲುಗಳನ್ನು ಕಡಿದು ಕಟ್ಟಿಗೆಗಳನ್ನಾಗಿ ಪರಿವರ್ತಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಈ ವಲಯ ಅರಣ್ಯ ಕಛೇರಿಯಲ್ಲಿ ಅರಣ್ಯ ತಕ್ಷೀರು ದಾಖಲಾಗಿದೆ.

ಗೆಲ್ಲುಗಳನ್ನು ಕಡಿದ ಆರೋಪಿ ಎ.ಎಫ್ ಮಸ್ಕರೇನಸ್ ಮಂಗಿಲಪದವು ರವರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಕರ್ನಾಟಕ ಅರಣ್ಯ ನಿಯಮಾವಳಿ ಪ್ರಕಾರ FIR ದಾಖಲಾಗಿದ್ದು 1.500 ಘನ ಮೀಟರ್ ಕಟ್ಟಿಗೆಯ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!