Sunday, June 7, 2026
Homeತಾಜಾ ಸುದ್ದಿವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಅರವಿಂದ ಬೆಲ್ಲದ್...

ವಿಧಾನ ಪರಿಷತ್ ವಿಪಕ್ಷ ನಾಯಕರಾಗಿ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭೆ ವಿಪಕ್ಷ ಉಪನಾಯಕರಾಗಿ ಅರವಿಂದ ಬೆಲ್ಲದ್ ನೇಮಕ

- Advertisement -
- Advertisement -

ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕರನ್ನಾಗಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನೇಮಕ ಮಾಡಲಾಗಿದ್ದು, ಎರಡನೇ ಬಾರಿಗೆ ಶ್ರೀನಿವಾಸ ಪೂಜಾರಿ ವಿಪಕ್ಷ ನಾಯಕರಾದಂತಾಗಿದೆ.‌

ವಿಧಾನಸಭೆ ವಿಪಕ್ಷ ಉಪ ನಾಯಕರನ್ನಾಗಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರನ್ನು ನೇಮಿಸಲಾಗಿದ್ದರೆ, ವಿಧಾನ ಪರಿಷತ್ ವಿಪಕ್ಷ ಉಪನಾಯಕರನ್ನಾಗಿ ಸುನೀಲ್ ವಲ್ಯಾಪುರೆ ನೇಮಕವಾಗಿದೆ.

ಇನ್ನು ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕರನ್ನಾಗಿ ಕುಷ್ಟಗಿ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ಮತ್ತು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರನ್ನಾಗಿ ಎನ್. ರವಿಕುಮಾರ್ ಅವರನ್ನು ನೇಮಕಾತಿ ಮಾಡಲಾಗಿದೆ.

ಈ ಮೂಲಕ ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗಗಳಿಗೆ ಬಿಜೆಪಿ ಪ್ರಾತಿನಿಧ್ಯ ನೀಡಿದಂತಾಗಿದೆ.‌

- Advertisement -

Latest News

error: Content is protected !!