Saturday, June 6, 2026
Homeಕರಾವಳಿರಾಷ್ಟ್ರೀಯ ಚಾಂಪಿಯನ್ ಮಂಗಳೂರು ವಿವಿ ಕಬಡ್ಡಿ ತಂಡಕ್ಕೆ ವಿಧಾನಸಭೆಯಲ್ಲಿ ಅಭಿನಂದನೆ

ರಾಷ್ಟ್ರೀಯ ಚಾಂಪಿಯನ್ ಮಂಗಳೂರು ವಿವಿ ಕಬಡ್ಡಿ ತಂಡಕ್ಕೆ ವಿಧಾನಸಭೆಯಲ್ಲಿ ಅಭಿನಂದನೆ

- Advertisement -
- Advertisement -

ಬೆಳಗಾವಿ: ರಾಷ್ಟ್ರೀಯ ಮಟ್ಟದ ಅಂತರ್ ವಿಶ್ವವಿದ್ಯಾಲಯ ಮಟ್ಟದ ಕಬಡ್ಡಿ ಚಾಂಪಿಯನ್‌ ಶಿಪ್ ನಲ್ಲಿ ಚಾಂಪಿಯನ್ ಆಗಿರುವ ಮಂಗಳೂರು ವಿಶ್ವವಿದ್ಯಾನಿಲಯ ತಂಡಕ್ಕೆ ವಿಧಾನಸಭೆ ಅಭಿನಂದನೆ ಸಲ್ಲಿಸಿದೆ.

ಶುಕ್ರವಾರ ನಡೆದ ವಿಧಾನಸಭಾ ಕಲಾಪದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಂಗಳೂರು ವಿವಿ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಕೂಡಾ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು.

ಈ ವೇಳೆ ತಂಡವನ್ನು ಅಭಿನಂದಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕೆಪಿಟಿಸಿಎಲ್ ನಲ್ಲಿ ಕಬಡ್ಡಿ ತಂಡವನ್ನು ರಚಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಈ ವೇಳೆ ಚಾಂಪಿಯನ್ ಆಗಿರುವ ಮಂಗಳೂರು ವಿವಿ ಕಬಡ್ಡಿ ತಂಡದ ಸದಸ್ಯರು ಸ್ಪೀಕರ್ ಗ್ಯಾಲರಿಯಲ್ಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!