Wednesday, June 3, 2026
Homeಕರಾವಳಿಧರ್ಮಸ್ಥಳಕ್ಕೆ ಬೆಂಗಳೂರಿನಿಂದ ಸೈಕಲ್ ಯಾತ್ರೆ ಕೈಗೊಂಡ ಶಾಸಕ!

ಧರ್ಮಸ್ಥಳಕ್ಕೆ ಬೆಂಗಳೂರಿನಿಂದ ಸೈಕಲ್ ಯಾತ್ರೆ ಕೈಗೊಂಡ ಶಾಸಕ!

- Advertisement -
- Advertisement -

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೆಂಗಳೂರಿನಿಂದ ಮಾಜಿ ಸಚಿವ ಮತ್ತು ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.ಬುಧವಾರ ಮುಂಜಾನೆ ಬೆಂಗಳೂರಿನಿಂದ ಹೊರಟಿದ್ದ ಸುರೇಶ್ ಕುಮಾರ್ ಇಂದು ಧರ್ಮಸ್ಥಳಕ್ಕೆ ತಲುಪಿದ್ದಾರೆ.

ದಿ ರಾಜಾಜಿನಗರ ಪೆಡಲ್ ಪವರ್ ತಂಡದ ಮೂಲಕ ಮೂರು ದಿನಗಳ ಸೈಕಲ್ ಯಾತ್ರೆ ಕೈಗೊಳ್ಳಲಾಗಿದ್ದು, ಎಂಟು ಜನ ಸಹ ಸವಾರರ ಜೊತೆ ಶಾಸಕ ಸುರೇಶ್ ಕುಮಾರ್ ಧರ್ಮಸ್ಥಳಕ್ಕೆ ತಲುಪಿದ್ದಾರೆ.

ಸುರೇಶ್ ಕುಮಾರ್ ಜೊತೆ ಅಯ್ಯಪ್ಪ, ಸಾಗರ್ ನಾಯ್ಡು, ಹರೀಶ್, ರಾಘವ್, ದಿವಾಕರ್, ಮೋಹನ್, ಬಾಲು ಮತ್ತು ಕಿರಣ್ ಸಹ ಸವಾರರಾಗಿ ಪಾಲ್ಗೊಂಡಿದ್ದರು.2014ರ ನವೆಂಬರ್ ನಲ್ಲಿ ಶಾಸಕ ಸುರೇಶ್ ಕುಮಾರ್, ಎಂಟು ದಿನಗಳ ಕಾಲ ಬೆಂಗಳೂರಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಸಿದ್ದರು.

- Advertisement -

Latest News

error: Content is protected !!