Wednesday, October 14, 2026
Homeಕರಾವಳಿಸುಳ್ಯ; ಪಂಜದ ಯುವಕ ಪಾಂಡಿಚೇರಿಯಲ್ಲಿ ಸಮುದ್ರಪಾಲು

ಸುಳ್ಯ; ಪಂಜದ ಯುವಕ ಪಾಂಡಿಚೇರಿಯಲ್ಲಿ ಸಮುದ್ರಪಾಲು

- Advertisement -
- Advertisement -

ಸುಳ್ಯ; ಪಂಜದ ಯುವಕನೊಬ್ಬ ಪಾಂಡಿಚೇರಿಯಲ್ಲಿ ಸಮುದ್ರಪಾಲಾದ ಘಟನೆ ನಡೆದಿದೆ. ಪಂಜ ಸಮೀಪದ ಕೂತ್ಕುಂಜ ಗ್ರಾಮದ ಚಿದ್ಗಲ್ ಗೋಪಾಲ್ ಮತ್ತು ಹೊನ್ನಮ್ಮ ದಂಪತಿಯ ಪುತ್ರ ಬಿಪಿನ್ ಚಿದ್ಗಲ್ ಸಮುದ್ರ ಪಾಲಾದ ಯುವಕ.

ಇಂಜಿನಿಯರ್ ಆಗಿದ್ದ ಬಿಪಿನ್ ಬೆಂಗಳೂರಿನ ಸಾಫ್ಟವೇರ್ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬಿಪಿನ್ ನಿನ್ನೆ ಗೆಳೆಯರೊಂದಿಗೆ ಪಾಂಡಿಚೇರಿಗೆ ಹೋಗಿದ್ದು, ಇಂದು ಅಲ್ಲಿ ಬೀಚ್‌ಗೆ ಹೋಗಿದ್ದ ವೇಳೆ ಸಮುದ್ರ ಪಾಲಾಗಿದ್ದಾರೆ. ಬಿಪಿನ್ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಊರಿಗೆ ತರುವ ಪ್ರಕ್ರಿಯೆ ನಡೆಯುತ್ತಿದೆ.

- Advertisement -

Latest News

error: Content is protected !!