Friday, May 3, 2024
Homeತಾಜಾ ಸುದ್ದಿಭಯೋತ್ಪಾದಕ ಆರೋಪಿಗಳ ಮೇಲೆ ನಿಗವಹಿಸಲು ಹೊಸದೊಂದು ಮಾದರಿ; ಶಂಕಿತ ಉಗ್ರರ ಕಾಲಿಗೆ ಜಿಪಿಎಸ್ ಆಧಾರಿತ ಬಳೆ...

ಭಯೋತ್ಪಾದಕ ಆರೋಪಿಗಳ ಮೇಲೆ ನಿಗವಹಿಸಲು ಹೊಸದೊಂದು ಮಾದರಿ; ಶಂಕಿತ ಉಗ್ರರ ಕಾಲಿಗೆ ಜಿಪಿಎಸ್ ಆಧಾರಿತ ಬಳೆ ಅಳವಡಿಕೆ

spot_img
- Advertisement -
- Advertisement -

ಭಯೋತ್ಪಾದಕ ಆರೋಪಿಗಳನ್ನು ಜಾಮೀನಿನ ಮೇಲೆ ನಿಗಾ ವಹಿಸಲು ಹೊಸ ಮಾದರಿಯ ಜಿಪಿಎಸ್‌ ಟ್ರಾಕರ್ ಆಂಪ್ಲೆಟ್‌ಗಳನ್ನು ಪರಿಚಯಿಸಿಲಾಗಿದ್ದು, ಈ ಮಾದರಿಯನ್ನು ಪರಿಚಯಿಸಿದ ದೇಶದ ಮೊದಲ ಪೊಲೀಸ್ ಪಡೆ ಎಂಬ ಹೆಗ್ಗಳಿಕೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪಾತ್ರರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿಯ ಪಾದದ ಸುತ್ತಲೂ ಜಿಪಿಎಸ್ ಟ್ರ್ಯಾಕರ್ ಆಂಪ್ಲೆಟ್ ಅನ್ನು ಅಳವಡಿಸಬಹುದಾಗಿದ್ದು, ಮೇಲ್ವಿಚಾರಣೆ ಮಾಡಲು ಮತ್ತು ಅವರ ಚಲನೆಯನ್ನು ಇದು ಟ್ರಾಕ್ ಮಾಡುತ್ತದೆ. ಜಿಪಿಎಸ್ ಆಧಾರಿತ ಬಳೆಯ ರೂಪದಲ್ಲಿರುವ ಈ ಸಾಧನ ದೇಶದಲ್ಲಿ ಮೊದಲ ಬಾರಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾದ ಭಯೋತ್ಪಾದಕರಿಗೆ ಜಿಪಿಎಸ್‌ ಟ್ರ್ಯಾಕರ್‌ ಅಳವಡಿಸಿದ ದೇಶದ ಮೊದಲ ಪೊಲೀಸ್ ಪಡೆ ಎಂಬ ಹೆಗ್ಗಳಿಗೆ ಜಮ್ಮು ಕಾಶ್ಮೀರ ಪೊಲೀಸರು ಪಾತ್ರರಾಗಿದ್ದಾರೆ.

ಈ ಸಾಧನವನ್ನು ಅಮೆರಿಕ, ಯುನೈಟೆಡ್ ಕಿಂಗ್‌ಡಮ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಜಾಮೀನು, ಪೆರೋಲ್ ಮತ್ತು ಗೃಹಬಂಧನದಲ್ಲಿರುವ ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಲು ಮತ್ತು ಜೈಲುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.

- Advertisement -
spot_img

Latest News

error: Content is protected !!