Thursday, June 4, 2026
Homeಕರಾವಳಿಉಡುಪಿಬೆಂಗಳೂರು ಕಂಬಳಕ್ಕೆ 150 ಕ್ಕೂ ಅಧಿಕ ಕೋಣಗಳ ನೋಂದಣಿ:ನ. 23 ಕ್ಕೆ ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ, ನೆಲಮಂಗಲದಲ್ಲಿ...

ಬೆಂಗಳೂರು ಕಂಬಳಕ್ಕೆ 150 ಕ್ಕೂ ಅಧಿಕ ಕೋಣಗಳ ನೋಂದಣಿ:ನ. 23 ಕ್ಕೆ ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ, ನೆಲಮಂಗಲದಲ್ಲಿ ಸ್ವಾಗತ

- Advertisement -
- Advertisement -

ಬೆಂಗಳೂರು: ನವೆಂಬರ್ 25 ಮತ್ತು 26 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಕಂಬಳಕ್ಕೆ ಈಗಾಗಲೇ 150ಕ್ಕೂ ಅಧಿಕ ಕೋಣಗಳ ನೋಂದಣಿ ಆಗಿವೆ.

ಕಂಬಳಕ್ಕೆ ನೋಂದಾಯಿತ ಎಲ್ಲಾ ಕೋಣಗಳನ್ನು ನವೆಂಬರ್ 23ರಂದು ಉಪ್ಪಿನಂಗಡಿಯಲ್ಲಿ ಬೀಳ್ಕೊಡುಗೆ ಮಾಡಿ ಕಳಿಸಿ ನಂತರ ಹಾಸನ ಹಾಗೂ ನೆಲಮಂಗಲದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲು ಬೆಂಗಳೂರು ಕಂಬಳ ಸಮಿತಿ ತೀರ್ಮಾನಿಸಿದೆ.

ಅಲ್ಲದೇ ಬೆಂಗಳೂರು ತಲುಪುವ ಮಾರ್ಗ ಮಧ್ಯೆ ಪ್ರತಿ ತಾಲೂಕಿನಲ್ಲೂ ಸ್ವಾಗತ ಮತ್ತು ಬೀಳ್ಕೊಡುಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದ 70 ಎಕರೆ ಜಾಗದಲ್ಲಿ ಕಂಬಳ ನಡೆಯಲಿದ್ದು, ಬಾಲಿವುಡ್ ನಟಿ ಐಶ್ವರ್ಯಾ ರೈ, ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಇರುವ ಕರಾವಳಿ ಮೂಲದ ಸಿನಿಮಾ ತಾರೆಯರು ಆಗಮಿಸಲಿದ್ದಾರೆ.‌

- Advertisement -

Latest News

error: Content is protected !!