Friday, May 17, 2024
Homeಕರಾವಳಿಕಡಬ; ಗಂಡ ಹೆಂಡತಿ ಜಗಳ ಪತ್ನಿ ಸಾವಿನಲ್ಲಿ ಅಂತ್ಯ; ಪತಿಯ ಸ್ಥಿತಿ ಗಂಭೀರ

ಕಡಬ; ಗಂಡ ಹೆಂಡತಿ ಜಗಳ ಪತ್ನಿ ಸಾವಿನಲ್ಲಿ ಅಂತ್ಯ; ಪತಿಯ ಸ್ಥಿತಿ ಗಂಭೀರ

spot_img
- Advertisement -
- Advertisement -

ಕಡಬ; ಗಂಡ ಹೆಂಡತಿ ಜಗಳ ಪತ್ನಿ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಪತಿಯ ಸ್ಥಿತಿ ಗಂಭೀರ ಕಡಬ ತಾಲೂಕಿನ ಕುದ್ಮಾರು ಗ್ರಾಮದ ಚಾಪೆಲ್ಲ ಎಂಬಲ್ಲಿ ಶನಿವಾರ  ರಾತ್ರಿ ನಡೆದಿದೆ.ಕುಸುಮ (39 ) ಹಾಗೂ ಅವರ ಗಂಡ ಸಂಜೀವ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಶನಿವಾರ ಕೂಡ ಜಗಳವಾಗಿ ಮಾತಿಗೆ ಮಾತು ಬೆಳೆದಿದೆ.  ಕೊನೆಗೆ ಕೋಪದ ಭರದಲ್ಲಿ ಇಬ್ಬರು ಕೂಡ ವಿಷ ಸೇವಿಸಿದ್ದಾರೆ. ಈ ವಿಚಾರ ಸ್ಥಳೀಯರಿಗೆ ತಿಳಿದು ತಕ್ಷಣ ಅವರ ಸಂಬಂಧಿಕರಿಗೆ ವಿಚಾರವನ್ನು ತಿಳಿಸಿದ್ದಾರೆ.

ಕೂಡಲೇ ಸಂಬಂಧಿಕರು  ಇಬ್ಬರನ್ನು ಆಸ್ಪತ್ರೆಗೆ ಸೇರಿಸುವ ಕರೆದೊಯ್ಯಲು ಮುಂದಾಗುವಷ್ಚರಲ್ಲಿ ಕುಸುಮ ಕೊನೆಯುಸಿರೆಳೆದಿದ್ದಾರೆ. ಸದ್ಯ ಸಂಜೀವ ಅವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

- Advertisement -
spot_img

Latest News

error: Content is protected !!