Sunday, June 28, 2026
Homeಕರಾವಳಿಉಡುಪಿಉಡುಪಿ : ಕರಾವಳಿಯಲ್ಲಿ ಆದಾಯ ತೆರಿಗೆ ಇಲಾಖೆ ಭರ್ಜರಿ ಬೇಟೆ:ಉಡುಪಿಯಲ್ಲಿ ದಾಖಲೆಯಿಲ್ಲದ 1280 ಕೆಜಿ ಚಿನ್ನ...

ಉಡುಪಿ : ಕರಾವಳಿಯಲ್ಲಿ ಆದಾಯ ತೆರಿಗೆ ಇಲಾಖೆ ಭರ್ಜರಿ ಬೇಟೆ:ಉಡುಪಿಯಲ್ಲಿ ದಾಖಲೆಯಿಲ್ಲದ 1280 ಕೆಜಿ ಚಿನ್ನ ಐಟಿ ವಶಕ್ಕೆ

- Advertisement -
- Advertisement -

ಉಡುಪಿ : ಆದಾಯ ತೆರಿಗೆ ಇಲಾಖೆ ಕರಾವಳಿ ಜಿಲ್ಲೆಯ ಜ್ಯುವೆಲರಿಯಲ್ಲಿ ಭರ್ಜರಿ ಬೇಟೆಯಾಡಿದೆ. ದಾಖಲೆಯಿಲ್ಲದ ಕೋಟ್ಯಾಂತರ ರೂಪಾಯಿ ಮೌಲ್ಯದ 1280 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದೆ‌.

ಕರ್ನಾಟಕದಲ್ಲಿ ಏಕಾಕಾಲದಲ್ಲಿ ಆಭರಣ ಜ್ಯುವೆಲರಿ ಸಂಸ್ಥೆ ಮೇಲೆ ಅ.31 ಕ್ಕೆ ಐಟಿ ಇಲಾಖೆ ದಾಳಿ ಮಾಡಿತ್ತು. ಸತತ ಐದು ದಿನ ನಿರಂತರ ದಾಳಿಯಲ್ಲಿ ಉಡುಪಿಯ ಆಭರಣ ಜ್ಯುವೆಲರಿ ಸಂಸ್ಥೆಯ ಮೈನ್ ಬ್ರಾಂಚ್ ನಲ್ಲಿ ದಾಖಲೆ ಇಲ್ಲದ 1280 ಕೆಜಿ ಚಿನ್ನವನ್ನು ನ.4 ರಂದು ರಾತ್ರಿ ವಶಕ್ಕೆ ಪಡೆದುಕೊಂಡಿದೆ. ವಶಪಡಿಸಿಕೊಂಡ 1280 ಕೆಜಿ ತೂಕದ ಚಿನ್ನದ ಬೆಲೆ ಬರೊಬ್ಬರಿ 723 ಕೋಟಿ ರೂಪಾಯಿ ಮೌಲ್ಯವಾಗಿದೆ ಎಂದು ಐಟಿ ಇಲಾಖೆಯ ಮೂಲಗಳು ಮಹಾ ಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ತಿಳಿಸಿದ್ದಾರೆ.

- Advertisement -

Latest News

error: Content is protected !!