Saturday, June 6, 2026
Homeಕರಾವಳಿಕಾಸರಗೋಡು; 19 ದಿನಗಳ ಹಿಂದೆ ವಿವಾಹದ ನವವಿವಾಹಿತೆ ನೇಣಿಗೆ ಶರಣು

ಕಾಸರಗೋಡು; 19 ದಿನಗಳ ಹಿಂದೆ ವಿವಾಹದ ನವವಿವಾಹಿತೆ ನೇಣಿಗೆ ಶರಣು

- Advertisement -
- Advertisement -

ಕಾಸರಗೋಡು : 19 ದಿನಗಳ ಹಿಂದೆ ವಿವಾಹದ ನವವಿವಾಹಿತೆ ನೇಣಿಗೆ ಶರಣಾಗಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಉಕ್ಕಿನಡ್ಕ ಮುಹಮ್ಮದ್ ಮತ್ತು ಬೀಫಾತಿಮಾ ದಂಪತಿಯ ಪುತ್ರಿ ಹಾಗೂ ಉಕ್ಕಿನಡ್ಕ ತಾಜುದ್ದೀನ್ ಎಂಬವರ ಪತ್ನಿ ಉಮೈರಾ ಬಾನು (22) ನೇಣಿಗೆ ಶರಣಾದ ನವವಿವಾಹಿತೆ. ಮನೆಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಉಮೈರಾ ಬಾನು ಮೃತದೇಹ ಪತ್ತೆಯಾಗಿದೆ. ತಾಜುದ್ದೀನ್ ಮತ್ತು ಉಮೈರಾ ಬಾನು ಪರಸ್ಪರ ಪ್ರೀತಿಸುತ್ತಿದ್ದರು. ತಾಜುದ್ದೀನ್ ಒಂದು ತಿಂಗಳ ಹಿಂದೆ ಗಲ್ಫ್ ನಿಂದ ಬಂದಿದ್ದು 19 ದಿನಗಳ ಹಿಂದೆ ಉಮೈರಾ ಅವರನ್ನು ವಿವಾಹವಾಗಿದ್ದರು. ನಿನ್ನೆ ಮನೆಯಲ್ಲಿ ಉಮೈರಾ ಮತ್ತು ತಾಜುದ್ದೀನ್ ಮಾತ್ರ ಇದ್ದರು. ತಾಜುದ್ದೀನ್ ಅವರ ಸಂಬಂಧಿ ಹೊಸ ಮನೆ ಕಟ್ಟುತ್ತಿದ್ದಾರೆ. ತಾಜುದ್ದೀನ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಸಿಮೆಂಟ್ ಇಳಿಸಲು ಸಂಬಂಧಿಕರ ಮನೆಗೆ ಹೋಗಿದ್ದರು. ತಾಜುದ್ದೀನ್ ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಗೆ ಬಾಗಿಲು ಹಾಕಲಾಗಿತ್ತು. ಬಾಗಿಲು ಬಡಿದರೂ ತೆರೆಯದೇ ಇದ್ದಾಗ ಬಾಗಿಲು ಒದ್ದು ನೋಡಿದಾಗ ಉಮೈರಾ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಶಾಲನ್ನು ಕತ್ತರಿಸಿ ಕೂಡಲೇ ಉಕ್ಕಿನಡ್ಕ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.  ಬದಿಯಡ್ಕ ಪೊಲೀಸರು ಪಂಚನಾಮೆ ನಡೆಸಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ತಜ್ಞ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಕೆಲವು ದಿನಗಳಿಂದ ಉಮೈರಾ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!