Friday, June 5, 2026
Homeಕರಾವಳಿಬೆಳ್ತಂಗಡಿ: ಇಸ್ರೇಲ್ ನಲ್ಲಿ ಶಾಂತಿ ಗೆ ಪ್ರಾರ್ಥಿಸಿ ಮರೋಡಿ ಉಮಾ ಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬೆಳ್ತಂಗಡಿ: ಇಸ್ರೇಲ್ ನಲ್ಲಿ ಶಾಂತಿ ಗೆ ಪ್ರಾರ್ಥಿಸಿ ಮರೋಡಿ ಉಮಾ ಮಹೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

- Advertisement -
- Advertisement -

ಬೆಳ್ತಂಗಡಿ: ಇಸ್ರೇಲ್ ದೇಶದಲ್ಲಿ ಶಾಂತಿ ನೆಲೆಸುವಂತೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆದಿದೆ.

ಮರೋಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ನಡೆಸಿದ್ದು, ಇಸ್ರೇಲ್ ನಲ್ಲಿರುವ ಮರೋಡಿ ಗ್ರಾಮದ ಜನರ ಸುರಕ್ಷತೆ ಮತ್ತು ಇಸ್ರೇಲ್ ನಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ನವರಾತ್ರಿ ಸಮಯದಲ್ಲಿ ವಿಶೇಷ ರಂಗಪೂಜೆ ಸಲ್ಲಿಸಿ ದೇವರಿಗೆ ವಿಶೇಷ ಪ್ರಾರ್ಥನೆ ನಡೆಸಿದ ಗ್ರಾಮಸ್ಥರು, ಇಸ್ರೇಲ್ ನಲ್ಲಿರುವ ಗ್ರಾಮದ ಉದ್ಯೋಗಿಗಳು ಸುರಕ್ಷಿತವಾಗಿ ಊರಿಗೆ ವಾಪಸಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ಇಸ್ರೇಲ್ ನಲ್ಲಿ ಮರೋಡಿ ಗ್ರಾಮದ ಹಲವರು ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ.

- Advertisement -

Latest News

error: Content is protected !!