Sunday, June 14, 2026
Homeಕರಾವಳಿಕಾಸರಗೋಡುಕಾಸರಗೋಡು:ಮೊಬೈಲ್ ಹೆಚ್ಚು ಬಳಸ್ಬೇಡ ಎಂದ ತಾಯಿಯನ್ನು ಹಲಗೆಯಿಂದ ಬಡಿದು ಕೊಲೆಗೈದ ಮಗ

ಕಾಸರಗೋಡು:ಮೊಬೈಲ್ ಹೆಚ್ಚು ಬಳಸ್ಬೇಡ ಎಂದ ತಾಯಿಯನ್ನು ಹಲಗೆಯಿಂದ ಬಡಿದು ಕೊಲೆಗೈದ ಮಗ

- Advertisement -
- Advertisement -

ಕಾಸರಗೋಡು:ಮೊಬೈಲ್ ಹೆಚ್ಚು ಬಳಸ್ಬೇಡ ಎಂದ ತಾಯಿಯನ್ನು ಮಗನೊಬ್ಬ ಹಲಗೆಯಿಂದ ಬಡಿದು ಕೊಲೆಗೈದ ಘಟನೆ ನೀಲೇಶ್ವರದಲ್ಲಿ ನಡೆದಿದೆ.ನೀಲೇಶ್ವರ ಕಣಿಚ್ಚರದ ರುಕ್ಮಿಣಿ (63) ಕೊಲೆಯಾದವರು.

ಕೊಲೆಗೈದ ಆರೋಪಿ ಪುತ್ರ ಸುಜಿತ್(34)ನನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ.ಮೊಬೈಲ್ ಫೋನ್ ಹೆಚ್ಚು ಬಳಕೆ ಮಾಡಬೇಡ ಎಂದು ತಾಯಿ ಹೇಳಿದಾಗ ಮಾತಿನ ಚಕಮಕಿ ನಡೆದು ಕೊಲೆಯಲ್ಲಿ ಕೊನೆಗೊಂಡಿದೆ.

ಹಲಗೆಯಿಂದ ತಲೆಗೆ ಬಡಿದ ಪರಿಣಾಮ ರುಕ್ಮಿಣಿ ಗಂಭೀರ ಗಾಯಗೊಂಡಿದ್ದು, ಕಣ್ಣೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಪೊಲೀಸರು ಆರೋಪಿಯನ್ನು ಬಂಧಿಸಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿದ್ದು, ವೈದ್ಯರು ಈತನಿಗೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!