Saturday, June 6, 2026
Homeಕರಾವಳಿಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಘರ್ಷಣೆ ಪ್ರಕರಣ; ರಾಗಿ ಗುಡ್ಡಕ್ಕೆ ಪುತ್ತೂರಿನ ಹಿಂದೂ ಮುಖಂಡ...

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಘರ್ಷಣೆ ಪ್ರಕರಣ; ರಾಗಿ ಗುಡ್ಡಕ್ಕೆ ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ

- Advertisement -
- Advertisement -

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಘರ್ಷಣೆ ಸಂಭವಿಸಿದ ಶಿವಮೊಗ್ಗ ಜಿಲ್ಲೆಯ ರಾಗಿ ಗುಡ್ಡಕ್ಕೆ ಪುತ್ತೂರಿನ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿದರು.ಗಲಭೆ ವೇಳೆ ಸಂತ್ರಸ್ಥರಾದವರ ಮನೆಗೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ, ನಿವಾಸಿಗಳಿಗೆ ಸಾಂತ್ವನ ಹೇಳಿದರು.

ರಾಗಿ ಗುಡ್ಡದಲ್ಲಿ ಕಲ್ಲು ತೂರಾಟಕ್ಕೊಳಪಟ್ಟ ಸಂತ್ರಸ್ತ ಪೀಟರ್ ಎಂಬವರ ಮನೆಗೆ ಅರುಣ್ ಕುಮಾರ್ ಪುತ್ತಿಲ ಮೊದಲು ಭೇಟಿ ನೀಡಿದರು.

ರಾಗಿ ಗುಡ್ಡದಲ್ಲಿ ನಡೆದಿದ್ದ ಗಲಾಟೆಯಲ್ಲಿ ಹಿಂದೂ ಸಮುದಾಯದವರ ಮನೆಗಳ ಮೇಲೆ ಕಲ್ಲು ತೂರಾಟ ನಡೆದು ವಾಹನಗಳು ಜಖಂಗೊಂಡಿದ್ದಲ್ಲದೇ ಹಲವರು ಗಾಯಗೊಂಡಿದ್ದರು.

ನಿನ್ನೆಯಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದ ಶಾಸಕರನ್ನೊಳಗೊಂಡ ಬಿಜೆಪಿ ಸತ್ಯ ಶೋಧನಾ ಸಮಿತಿ ರಾಗಿ ಗುಡ್ಡಕ್ಕೆ ಭೇಟಿ ನೀಡಿತ್ತು.

- Advertisement -

Latest News

error: Content is protected !!