Monday, June 29, 2026
Homeಕರಾವಳಿಉಡುಪಿನಾನು ಹಣ ಗಳಿಸಲು ಇದೆಲ್ಲವನ್ನು ಮಾಡಿದೆ; ಸಿಸಿಬಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡ ಚೈತ್ರಾ ಕುಂದಾಪುರ

ನಾನು ಹಣ ಗಳಿಸಲು ಇದೆಲ್ಲವನ್ನು ಮಾಡಿದೆ; ಸಿಸಿಬಿ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡ ಚೈತ್ರಾ ಕುಂದಾಪುರ

- Advertisement -
- Advertisement -

ಬೆಂಗಳೂರು : ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ವಂಚಿಸಿದ ಪ್ರಕರಣದಲ್ಲಿ ಸಿಸಿಬಿ ಕಸ್ಟಡಿಯಲ್ಲಿರುವ ಚೈತ್ರಾ ಕುಂದಾಪುರಳನ್ನು ಸಿಸಿಬಿ ಪೊಲೀಸರು ಚೆನ್ನಾಗಿಯೇ ಛಾಡಿಸಿದ್ದಾರೆ. ಸಿಸಿಬಿ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಚೈತ್ರಾ ಪತರುಗುಟ್ಟಿ ಹೋಗಿದ್ದು ಕೊನೆಗೆ ತನಗಿನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ಸತ್ಯ ಹೇಳೋದು ಒಳಿತು ಅಂತಾ ಎಲ್ಲಾ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ.

ಸಿಸಿಬಿ ಅಧಿಕಾರಿಗಳು ವಿಚಾರಣೆ ವೇಳೆ ಚೈತ್ರಾ ಆಂಡ್ ಗ್ಯಾಂಗ್ ನಡೆಸಿದ ವ್ಯವಹಾರಕ್ಕೆ ಸಂಬಂಧಿಸಿದಂತೆ  ವಿಡಿಯೋ, ಆಡಿಯೋ, ಮೊಬೈಲ್ ಕರೆಗಳು ಹಾಗೂ ವಂಚನೆ ಮಾಡಿದ್ದಾರೆ ಎನ್ನುವುದಕ್ಕೆ ಚಿನ್ನ, ಹಣ, ಬ್ಯಾಂಕ್, ಠೇವಣಿ, ಜಪ್ತಿ ಮಾಡಿದ್ದ ಕಾರು ಸೇರಿ ಎಲ್ಲಾ ದಾಖಲೆಗಳನ್ನ ಮುಂದಿಟ್ಟು ಪ್ರಶ್ನೆ ಕೇಳಿದ್ದಾರೆ. ಬಾಣದಂತೆ ತೂರಿ ಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಚೈತ್ರಾ ಬೇರೆ ದಾರಿ ಕಾಣದೆ ಎಲ್ಲವನ್ನು ಬಾಯಿಬಿಟ್ಟಿದ್ದಾಳೆ.

ತಾನು ಹಣ ಮಾಡುವುದಕ್ಕಾಗಿ ಈ ರೀತಿ ತಪ್ಪು ದಾರಿ ಕಂಡುಕೊಂಡೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ. ನಾನು ಪರಿಚಿತರೊಬ್ಬರ ಮೂಲಕ ಗೋವಿಂದ ಬಾಬು ಅವರನ್ನು ಮುನ್ನೆಲೆಗೆ ತರುತ್ತೇನೆ ಎಂದು ನಂಬಿಸಿ ಟಿಕೆಟ್ ನಮಗೆ ಬರುವಂತಹ ಸನ್ನಿವೇಶ ಸೃಷ್ಟಿಸುವುದಾಗಿ ಹೇಳಿದ್ದಾಳೆ. ನಂತರ ಟಿಕೆಟ್ ಸಿಕ್ಕರೆ ತಾನು ಸೇಫ್ ಅಂತ ಪ್ಲಾನ್ ಮಾಡಿದ್ದಳು ಎಂದು ಹೇಳಿದ್ದಾಳೆ.

ಒಂದು ವೇಳೆ ಪ್ಲಾನ್ ಮಿಸ್ಸಾಗಿ ಟಿಕೆಟ್ ಮಿಸ್ ಆದ್ರೂ ಕೂಡ ಏನು ಮಾಡಬೇಕು ಅನ್ನೋದನ್ನ ಕೂಡ ಚೈತ್ರ ಮತ್ತು ಒಂದು ವೇಳೆ ಟಿಕೆಟ್ ಮಿಸ್ ಆಗಿದ್ದರೆ.ಚೈತ್ರಾ ಮತ್ತು ಗ್ಯಾಂಗ್ ಎರಡನೇ ಪ್ಲಾನ್ ಮಾಡಿದ್ದರು. ನಾವು ಹಣ ಇಟ್ಟುಕೊಂಡಿಲ್ಲ ವಿಶ್ವನಾಥ ಜಿಗೆ ಕೊಟ್ಟಿದ್ದಾಗಿ ಗೋವಿಂದ ಬಾಬುಗೆ ಹೇಳಿದ್ದಾರೆ.ನಾವು ನೆಪ ಮಾತ್ರಕ್ಕೆ ಸಹಾಯ ಮಾಡಿದ್ದೇವೆ ಹಣ ತೆಗೆದುಕೊಂಡು ಹೋಗಿ ನೀಡಿದ್ದೇವೆ ಅಷ್ಟೇ ಎಂದು ನಂಬಿಸುವುದು ಎರಡನೇ ಪ್ಲಾನ್ ಆಗಿತ್ತು.

ಒಂದು ವೇಳೆ ನಂಬದಿದ್ದರೆ ವಿಶ್ವನಾಥ್ ಜಿ ಮೃತಪಟ್ಟಿದ್ದಾರೆ. ನಮಗೆ ಗೊತ್ತೇ ಇಲ್ಲ ಎಂದು ಗೋವಿಂದ ಬಾಬು ಬಳಿ ಹೇಳುವುದಾಗಿ ಪ್ಲಾನ್ ಮಾಡಿದ್ದರು. ಅದರಂತೆ ಗೋವಿಂದ ಬಾಬುಗೆ ಚೈತ್ರಾ ಅಂಡ್ ಗ್ಯಾಂಗ್ ಹೇಳಿತ್ತು. ನಂತರ ಮೂರುವರೆ ಕೋಟಿ ಚೈತ್ರಾ ಕೈ ಸೇರಿತ್ತು ಎನ್ನಲಾಗಿದೆ.ಈ ಎಲ್ಲಾ ವಿಚಾರವನ್ನು ಸಿಸಿಬಿ ಮುಂದೆ ಚೈತ್ರ ಬಾಯಿಟ್ಬಿದ್ದಾಳೆ.

- Advertisement -

Latest News

error: Content is protected !!