Saturday, June 13, 2026
Homeಕರಾವಳಿಬೆಳ್ತಂಗಡಿ; ಅಂಡಿಂಜೆಯಲ್ಲಿ ಜುಗಾರಿ ಆಡುತ್ತಿದ್ದಾಗ ಪೊಲೀಸರ ದಾಳಿ

ಬೆಳ್ತಂಗಡಿ; ಅಂಡಿಂಜೆಯಲ್ಲಿ ಜುಗಾರಿ ಆಡುತ್ತಿದ್ದಾಗ ಪೊಲೀಸರ ದಾಳಿ

- Advertisement -
- Advertisement -

ಬೆಳ್ತಂಗಡಿ; ಜುಗಾರಿ ಆಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕು ಅಂಡಿಂಜೆ ಗ್ರಾಮದ ಕಿಲಾರ ಮಾರಿಕಾಂಬ ದೇವಸ್ಥಾನದ ಹಿಂಭಾಗದ ಸರಕಾರಿ ಗುಡ್ಡೆ ಪ್ರದೇಶದಲ್ಲಿ ನಡೆದಿದೆ.

ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಎಲೆಗಳಿಂದ ಜುಗಾರಿ ಆಟ ಆಡುತ್ತಿದ್ದಾಗ, ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯ ತಂಡ ದಾಳಿ ಮಾಡಿದೆ.

ಈ ವೇಳೆ  ಅಂಡಿಂಜೆ  ಗ್ರಾಮದ ವಾಸಿಗಳಾದ ಸಿರಿಲ್ ಮಿನೇಜಸ್, ಎಂ ಸಿ ಸುಂದರ, ಶೀನ ಮತ್ತು ರಾಘವ ಆಚಾರಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಿಂದ ಜುಗಾರಿ ಆಟಕ್ಕೆ ಉಪಯೋಗಿಸಿದ ಇಸ್ಪೀಟ್ ಎಲೆಗಳನ್ನು  ಹಾಗೂ ಆಟಕ್ಕೆ  ಬಳಸಿದ ನಗದು ಹಣ ಒಟ್ಟು 1560/- ರೂ. ಗಳನ್ನು ಸ್ವಾಧೀನಪಡಿಸಿಕೊಂಡು, ವೇಣೂರು ಠಾಣೆಯಲ್ಲಿ ಅ.ಕ್ರ ನಂಬ್ರ 59-2023 ಕಲಂ: 87  ಕೆ ಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!