Saturday, June 13, 2026
Homeಕರಾವಳಿಬಂಟ್ವಾಳ: ಅಡಿಕೆಗಳ್ಳರಿಬ್ಬರಿಗೆ ಧರ್ಮದೇಟು ಕೊಟ್ಟ ಸ್ಥಳೀಯರು

ಬಂಟ್ವಾಳ: ಅಡಿಕೆಗಳ್ಳರಿಬ್ಬರಿಗೆ ಧರ್ಮದೇಟು ಕೊಟ್ಟ ಸ್ಥಳೀಯರು

- Advertisement -
- Advertisement -

ಬಂಟ್ವಾಳ: ಅಡಿಕೆಗಳ್ಳರಿಬ್ಬರಿಗೆ ಸ್ಥಳೀಯರು ಧರ್ಮದೇಟು ಕೊಟ್ಟ ಘಟನೆ ಮಣಿನಾಲ್ಕೂರು ಗ್ರಾಮದ ಹಂಡೀರು ಎಂಬಲ್ಲಿ ಸೋಮವಾರ ರಾತ್ರಿ ವೇಳೆ ನಡೆದಿದೆ. ಇದೀಗ ಘಟನೆಯ ವಿಡಿಯೋ ವೈರಲ್ ಆಗಿದೆ.

ಕಳೆದ ಕೆಲವು ದಿನಗಳಿಂದ ಇಲ್ಲಿ ಸುತ್ತಮುತ್ತಲಿನ ಅಡಿಕೆ ತೋಟದಿಂದ ಅಡಿಕೆ ಕಳವಾಗುತ್ತಿತ್ತು. ಹಾಗಾಗಿ  ಕಳ್ಳರ ಪತ್ತೆಗಾಗಿ ತೋಟದ ಮಾಲೀಕರು ಕಾದು ಕುಳಿತಿದ್ದರು. ಸೆ.4 ರ ರಾತ್ರಿ ಕಳ್ಳರು ಕಳ್ಳತನಕ್ಕೆ ಬಂದಾಗ ಸ್ಥಳೀಯರು ರೈಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಬಳಿಕ ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು ನೀಡಿದ್ದಾರೆ.  

ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ. ಇಬ್ಬರೂ ಕೂಡ ಸ್ಥಳೀಯರು ಎನ್ನಲಾಗಿದ್ದು ಈ ಬಗ್ಗೆ ಪೋಲೀಸ್ ಠಾಣೆಗೆ ಯಾವುದೇ ದೂರು ಬಂದಿಲ್ಲ ಎಂದು ಇಲ್ಲಿನ ಪೋಲೀಸ್ ಉಪನಿರೀಕ್ಷಕ ಹರೀಶ್ ತಿಳಿಸಿದ್ದಾರೆ

- Advertisement -

Latest News

error: Content is protected !!