- Advertisement -
- Advertisement -
ಪುತ್ತೂರು: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಬಳಿ ನಡೆದಿದೆ.ಬೆಟ್ಟಂಪಾಡಿ ಗ್ರಾಮದ ಅಂಗರಾಜೆ ಬಾಲೊಂಟ್ಟು ಗುತ್ತು ರವೀಂದ್ರನಾಥ ಆಳ್ವ (55) ಮೃತ ದುರ್ದೈವಿ.
ರವೀಂದ್ರನಾಥ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಪತ್ನಿ ಹಾಗೂ ಮಕ್ಕಳಿಬ್ಬರು ಬೆದ್ರಾಳದ ತವರು ಮನೆಯಲ್ಲಿ ವಾಸಿಸುತ್ತಿದ್ದರು. ರವೀಂದ್ರನಾಥ ಆಳ್ವರು ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಪ್ರತಿ ದಿನ ಪಕ್ಕದ ಸಹೋದರನ ಮನೆಯಲ್ಲಿ ಊಟ ಮಾಡುತ್ತಿದ್ದ ಅವರು ಸೆ. 3ರಂದು ರಾತ್ರಿ ಎಂದಿನಂತೆ ಊಟಕ್ಕೆ ತೆರಳಿ ತಾನು ಮನೆಯಲ್ಲಿ ಊಟ ಮಾಡುವುದಾಗಿ ಬುತ್ತಿ ತೆಗೆದುಕೊಂಡು ಹೋದವರು ಎರಡು ದಿನಗಳಾದರೂ ಬಂದಿರಲಿಲ್ಲ.ಈ ಹಿನ್ನೆಲೆಯಲ್ಲಿ ಮಂಗಳವಾರ ಪರಿಶೀಲಿಸಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
- Advertisement -