- Advertisement -
- Advertisement -
ಬೆಂಗಳೂರು: ಚಲನಚಿತ್ರ ನಟಿ ಮತ್ತು ಮಾಜಿ ಸಂಸದೆ ರಮ್ಯಾ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೇಕ್ ನ್ಯೂಸ್ ಹರಿದಾಡಿದ ಕಾರಣ ಅಭಿಮಾನಿಗಳು ಕೆಲವು ಹೊತ್ತು ಗಾಬರಿ ಬಿದ್ದ ಘಟನೆ ನಡೆದಿದೆ.

ರಮ್ಯಾ ಎಂಬ ತಮಿಳು ಧಾರವಾಹಿ ನಟಿ ಅನಾರೋಗ್ಯದ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿದ್ದು, ಅದನ್ನು ತಪ್ಪಾಗಿ ಸ್ಯಾಂಡಲ್ ವುಡ್ ನಟಿ ರಮ್ಯಾ ಎಂದು ಭಾವಿಸಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು ಎಡವಟ್ಟಿಗೆ ಕಾರಣವಾಗಿತ್ತು.

ಖಚಿತ ಮಾಹಿತಿ ಇಲ್ಲದೇ ರಮ್ಯಾ ಮೃತಪಟ್ಟಿದ್ದಾರೆ ಎಂದು ಪೋಸ್ಟ್ ಮಾಡಿದವರು ಮಾಜಿ ಸಂಸದೆ ರಮ್ಯಾ ಫೋಟೋ ಹಂಚಿಕೊಂಡಿದ್ದೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿತ್ತು.ನಟಿ ರಮ್ಯಾ ಸದ್ಯ ಜಿನೇವಾದಲ್ಲಿ ಇದ್ದು ಶುಕ್ರವಾರ ಬೆಂಗಳೂರಿಗೆ ವಾಪಸ್ ಅಗಲಿದ್ದಾರೆ ಎನ್ನಲಾಗಿದೆ.
- Advertisement -