Friday, June 5, 2026
Homeತಾಜಾ ಸುದ್ದಿತುಮಕೂರಿನಲ್ಲಿ ಮದುವೆ ಮನೆಯಲ್ಲಿ ಹೈಡ್ರಾಮಾ; ಇನ್ನೇನು ತಾಳಿ ಕಟ್ಬೇಕು ಅನ್ನುವಷ್ಟರಲ್ಲಿ ಹೊರ ನಡೆದ ವಧು

ತುಮಕೂರಿನಲ್ಲಿ ಮದುವೆ ಮನೆಯಲ್ಲಿ ಹೈಡ್ರಾಮಾ; ಇನ್ನೇನು ತಾಳಿ ಕಟ್ಬೇಕು ಅನ್ನುವಷ್ಟರಲ್ಲಿ ಹೊರ ನಡೆದ ವಧು

- Advertisement -
- Advertisement -

ತುಮಕೂರು;ಇನ್ನೇನು ವರ ತಾಳಿ ಕಟ್ಬೇಕು ಅನ್ನುವಷ್ಟರಲ್ಲಿ ವಧುವೊಬ್ಬಳು ಮದುವೆ ಬೇಡ ಎಂದು ಹೊರ ನಡೆದ ಘಟನೆ ತುಮಕೂರಿನಲ್ಲಿ ಮದುವೆ ಮನೆಯಲ್ಲಿ ಹೈಡ್ರಾಮಾ; ಇನ್ನೇನು ತಾಳಿ ಕಟ್ಬೇಕು ಅನ್ನುವಷ್ಟರಲ್ಲಿ ಹೊರ ನಡೆದ ವಧು ತುಮಕೂರು ಜಿಲ್ಲೆ‌ ಕೊರಟಗೆರೆ ತಾಲೂಕಿನ ಕೊಳಾಲದಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ದೊಡ್ಡೆಬೆಲೆ ಗ್ರಾಮದ ಯುವತಿ ಮದುವೆ ದೊಡ್ಡಬಳ್ಳಾಪುರ ತಾಲೂಕಿನ ಮೂಡ್ಲಕಾಳೇನಹಳ್ಳಿಯ ವೆಂಕಟೇಶ್ ಜೊತೆ ನಿಶ್ಚಯವಾಗಿತ್ತು. ಅದರಂತೆ ಅದರಂತೆ ಎರಡೂ ಕುಟುಂಬಸ್ಥರು ಮದ್ವೆಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದರು. ಅಲ್ಲದೇ ನಿನ್ನೆ (ಆಗಸ್ಟ್ 27) ರಾತ್ರಿ ಕೆಸಿಎನ್​ ಕನ್ವೆನ್ಷನ್ ಹಾಲ್​ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವೂ ಮುಗಿದಿತ್ತು. ಸ್ಟೇಜ್​ ಮೇಲೆ ಒಬ್ಬರಿಗೊಬ್ಬರು ನಗುನಗುತ್ತಲೇ ಫೋಟೋಗೆ ಫೋಸ್ ನೀಡಿದ್ದರು. ಆದ್ರೆ, ಇನ್ನೇನು ಬೆಳಗ್ಗೆ ಮುಹೂರ್ತದಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲೇ ವಧು ನನಗೆ  ಈ ಮದುವೆ ಬೇಡ ಎಂದಿದ್ದಾಳೆ,

ವಧು ಉಲ್ಟಾ ಹೊಡೆಯುತ್ತಿದ್ದಂತೆ ಕಲ್ಯಾಣ ಮಂಟಪದಲ್ಲಿ ಗದ್ದಲ ಉಂಟಾಗಿದ್ದು, 2 ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಇದೀಗ ಅಂತಿಮವಾಗಿ ಈ ಮದ್ವೆ ಗಲಾಟೆ ಕೊಳಾಲ‌ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಎರಡೂ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ. ಮೂರು ತಿಂಗಳು ಮೊದಲೇ ಇಬ್ಬರಿಗೂ ಎಂಗಜ್ಮೆಂಟ್ ಆಗಿತ್ತು. ಒಂದು ಲಕ್ಷ ರೂ. ಖರ್ಚು ಮಾಡಿ ಎಂಗಜ್ಮೆಂಟ್ ಮಾಡಲಾಗಿತ್ತು. ಇದೀಗ ಏಕಾಏಕಿ ವಧು ಮದುವೆಯೇ ಬೇಡ ಎಂದಿದ್ದು, ಇದೀಗ ಪೊಲೀಸ್ ಠಾಣೆಯಲ್ಲಿ ವಧು -ವರನ ಕುಟುಂಬಸ್ಥರ ನಡುವೆ ಸಂಧಾನ ಸರ್ಕಸ್ ನಡೆಯುತ್ತಿದೆ. ಈ ಸಂಧಾನ ಸಭೆಯಲ್ಲಿ ವಧು ಪ್ರಿಯಕರ ಸಹ ಹಾಜರಾಗಿದ್ದಾನೆ.

ಯಾವುದೇ ಕಾರಣಕ್ಕೂ ನಾನು ಮದುವೆಯಾಗುವುದಿಲ್ಲವೆಂದು ವಧು ಬಿಗಿಪಟ್ಟು ಹಿಡಿದಿದ್ದಾಳೆ. ಮತ್ತೊಂದೆಡೆ
ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚುಮಾಡಿದ್ದೇವೆ. ಈಗ ಮದುವೆ ಬೇಡ ಅಂದ್ರೆ ಹೇಗೆ ಎಂದು ವರನ ಕಡೆಯವರು ಆಕ್ರೋಶಗೊಂಡಿದ್ದಾರೆ. ಕೊನೆಗೆ ಪೊಲೀಸರು ಎರಡೂ ಕುಟುಂಬಗಳ ಮಧ್ಯೆ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ,

- Advertisement -

Latest News

error: Content is protected !!