Friday, June 5, 2026
Homeಕರಾವಳಿಮಂಗಳೂರು; ಆಟವಾಡುತ್ತಾ ಮಹಡಿಯಿಂದ ಕೆಳಗೆ ಬಿದ್ದ ಮಗು

ಮಂಗಳೂರು; ಆಟವಾಡುತ್ತಾ ಮಹಡಿಯಿಂದ ಕೆಳಗೆ ಬಿದ್ದ ಮಗು

- Advertisement -
- Advertisement -

ಮಂಗಳೂರು; ಆಟವಾಡುತ್ತಾ ಮಗುವೊಂದು ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ನಡೆದಿದೆ.

ತಾಯಿ ಬ್ಯಾಂಕ್‌ಗೆ ಬಂದಾಗ ಜತೆಗೆ ಮೂರು ವರ್ಷದ ಗಂಡು ಮಗು ಕೂಡ ಬಂದಿತ್ತು. ತಾಯಿ ಬ್ಯಾಂಕ್‌ ಒಳಗಿರುವಾಗ ಮಗು ಹೊರಗೆ ಆಟವಾಡುತ್ತಿತ್ತು. ಜತೆಗೆ ಪಕ್ಕದಲ್ಲೇ ಇನ್ನೊಂದು ಮಗು ಕೂಡ ಇತ್ತು. ಬಳಿಕ ಮಗು ಆಟವಾಡುತ್ತಾ ಕಟ್ಟಡದಲ್ಲಿ ಅಳವಡಿಸಿದ ಗ್ರಿಲ್‌ಗೆ ಹತ್ತಲು ಪ್ರಯತ್ನಿಸಿದೆ. ಗ್ರಿಲ್ ಹತ್ತುವಾಗ ಮಗು ಆಯತಪ್ಪಿ ಮೊದಲ ಮಹಡಿಯಿಂದ ನೆಲಮಹಡಿಗೆ ಬಿದ್ದಿದೆ.

ಕೆಳಗೆ ಬಿದ್ದ ರಭಸಕ್ಕೆ ಮಗುವಿನ ತಲೆ ಮತ್ತು ಕೈಗೆ ಗಾಯವಾಗಿತ್ತು. ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಪ್ರಾಣಪಾಯದಿಂದ ಪಾರಾಗಿದೆ.

- Advertisement -

Latest News

error: Content is protected !!