Saturday, June 6, 2026
Homeತಾಜಾ ಸುದ್ದಿಚಂದ್ರಯಾನ ಯಶಸ್ಸಿಗೆ ಪೇಜಾವರ ಶ್ರೀ ವಿಶೇಷ ಪ್ರಾರ್ಥನೆ

ಚಂದ್ರಯಾನ ಯಶಸ್ಸಿಗೆ ಪೇಜಾವರ ಶ್ರೀ ವಿಶೇಷ ಪ್ರಾರ್ಥನೆ

- Advertisement -
- Advertisement -

ಮೈಸೂರು: ಚಂದ್ರಯಾನ 3 ಯಶಸ್ವಿ ಲ್ಯಾಂಡಿಂಗ್ ಗಾಗಿ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ತುಪ್ಪ ದೀಪ ಹಚ್ಚುವ ಮೂಲಕ ಲಕ್ಷ್ಮೀ ನರಸಿಂಹ ದೇವರಲ್ಲಿ ಚಂದ್ರಯಾನ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಪೇಜಾವರ ಶ್ರೀ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.ಸದ್ಯ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮೈಸೂರಿನಲ್ಲಿ ಚಾತುರ್ಮಾಸ್ಯದಲ್ಲಿ ಇದ್ದಾರೆ.

ಇಂದು ಸಂಜೆ ಚಂದ್ರಯಾನ-3 ಚಂದ್ರನಲ್ಲಿ ನಿಲುಗಡೆಯಾಗಲಿದ್ದು, ಯಶಸ್ವಿಯಾಗಲಿ ಎಂದು ರಾಜ್ಯಾದ್ಯಂತ ವಿಶೇಷ ಪೂಜೆ ಮತ್ತು‌ ಪ್ರಾರ್ಥನೆಗಳು ನಡೆದಿವೆ.

- Advertisement -

Latest News

error: Content is protected !!