Saturday, June 6, 2026
Homeಚಿಕ್ಕಮಗಳೂರುಚಿಕ್ಕಮಗಳೂರು; ಪ್ರೇಮಿಯ ಜೊತೆ ಸೇರಿ ಪತಿಯನ್ನೇ ಮುಗಿಸಿದ ಚಾಲಾಕಿ ಪತ್ನಿ

ಚಿಕ್ಕಮಗಳೂರು; ಪ್ರೇಮಿಯ ಜೊತೆ ಸೇರಿ ಪತಿಯನ್ನೇ ಮುಗಿಸಿದ ಚಾಲಾಕಿ ಪತ್ನಿ

- Advertisement -
- Advertisement -

ಚಿಕ್ಕಮಗಳೂರು; ಪ್ರೇಮಿಯ ಜೊತೆ ಸೇರಿ ಪತಿಯನ್ನೇ ಚಾಲಾಕಿ ಪತ್ನಿ ಮುಗಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ. ಪಾವನ ಪತಿಯನ್ನು ಕೊಲೆಗೈದ ಪತ್ನಿ. ನವೀನ್ (28) ಕೊಲೆಯಾದ ಪತಿ.

ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಪತಿಯನ್ನು ಪ್ರೇಮಿ ಸಂಜಯ್ ಜೊತೆ ಬೈಕ್ ನಲ್ಲಿ ತಂದು ಕೆರೆಗೆ ಹಾಕಿದ್ದಾಳೆ ಪಾವನ. ಆಗಸ್ಟ್ 6ರಂದು ಯಗಟಿ ಕೆರೆ ಬಳಿ ನವೀನ್ ಮೃತದೇಹ ಪತ್ತೆಯಾಗಿತ್ತು. ಇದು ಸಹಜ ಸಾವಲ್ಲ, ಕೊಲೆ ಎಂದು ನವೀನ್ ಪೋಷಕರು ದೂರು ನೀಡಿದ್ದರು.ತನಿಖೆ ಕೈಗೊಂಡ ಪೊಲೀಸರಿಗೆ ಪತ್ನಿಯೇ ಮರ್ಡರ್ ಹಿಂದಿರುವ ಪಾಪಿ ಅನ್ನೋದು ಗೊತ್ತಾಗಿದೆ.

ಪ್ರೇಮಿ ಸಂಜಯ್ ಜೊತೆ ಇರಲು ಪತಿ ನವೀನ್ ಅಡ್ಡಗಾಲಾಗುತ್ತಿದ್ದ. ಇದೇ ಕಾರಣಕ್ಕೆ ಇಬ್ಬರು ಸೇರಿ ನವೀನ್ ನನ್ನು ಮುಗಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಎಲ್ಲಾ ಸತ್ಯವನ್ನು ಪಾವನ ಹಾಗೂ ಸಂಜಯ್  ಬಾಯ್ಬಿಟ್ಟಿದ್ದಾರೆಯ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!