Saturday, June 13, 2026
Homeಕರಾವಳಿಮಂಗಳೂರು: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಮಂಗಳೂರು: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

- Advertisement -
- Advertisement -

ಮಂಗಳೂರು: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮುಸ್ತಫಾ ಆಲಿಯಾಸ್‌ ಮೊಹಮ್ಮದ್‌ ಮುಸ್ತಫಾ(63) ಬಂಧಿತ ಆರೋಪಿ.


ಮೂಲತಃ ಕುಳಾಯಿ ನಿವಾಸಿಯಾಗಿದ್ದು ಪ್ರಸ್ತುತ ನಂದಿಕೂರು ಗ್ರಾಮದ ಪಲಿಮಾರಿನಲ್ಲಿ ವಾಸವಾಗಿದ್ದ ಈತ 1993ರಲ್ಲಿ ಸುರತ್ಕಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಭಾಗಿಯಾಗಿದ್ದ . ಬಳಿಕ ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡಿದ್ದ. ಇದೀಗ ಆರೋಪಿಯನ್ನು 30 ವರ್ಷಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ ಹೆಗಡೆ, ಪೊಲೀಸ್‌ ನಿರೀಕ್ಷಕ ಶ್ಯಾಮ್‌ ಸುಂದರ್‌ ಎಚ್‌ ಎಂ, ಪಿಎಸ್‌ಐ ಸುದೀಪ್‌ ಎಂ.ವಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!