- Advertisement -
- Advertisement -
ಕಾಸರಗೋಡು; ಮಾತನಾಡುತ್ತಿರುವಾಗಲೇ ಮೊಬೈಲ್ ಸ್ಫೋಟಗೊಂಡು ವ್ಯಕ್ತಿಗೆ ಗಾಯವಾಗಿರುವ ಘಟನೆ ಕಾಸರಗೋಡಿನ ಪರಪ್ಪ ಬಳಿ ಮಂಗಳವಾರ ನಡೆದಿದೆ.ಪಳ್ಳತುಮೂಲೆಯ ರವೀಂದ್ರನ್ ಗಾಯಗೊಂಡವರು .
ನಿನ್ನೆ ಬೆಳಗ್ಗೆ ಮನೆಯಲ್ಲಿ ಅವರು ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ಮೊಬೈಲ್ ಸ್ಫೋಟಗೊಂಡಿದೆ.ಇದರಿಂದ ಅವರ ಬಲಕೈಗೆ ಗಾಯಗಳಾಗಿವೆ. ಕರೆ ಬಂದಾಗ ರಿಸೀವ್ ಮಾಡಿದ್ದು, ಈ ಸಂದರ್ಭ ಮೊಬೈಲ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಗಾಬರಿಗೊಂಡು ಎಸೆಯುತ್ತಿದ್ದಂತೆ ಸ್ಫೋಟಗೊಂಡಿದೆ. ವಿದೇಶದಿಂದ ಸಂಬಂಧಿಕರೋರ್ವರು ಈ ಮೊಬೈಲ್ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
- Advertisement -