Saturday, June 6, 2026
Homeತಾಜಾ ಸುದ್ದಿಮೋದಿ ಮನ್ ಕಿ ಬಾತ್ ನಲ್ಲಿ ಹೊಗಳಿದ ಕರ್ನಾಟಕದ ರೈತ ಇವರೇ ನೋಡಿ..

ಮೋದಿ ಮನ್ ಕಿ ಬಾತ್ ನಲ್ಲಿ ಹೊಗಳಿದ ಕರ್ನಾಟಕದ ರೈತ ಇವರೇ ನೋಡಿ..

- Advertisement -
- Advertisement -

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಇವತ್ತು ತಮ್ಮ ಮನ್ ಕೀ ಬಾತ್ ನಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಕೊರೊನಾದಿಂದಾಗಿ ದೇಶದಲ್ಲಿ ಏನೆಲ್ಲಾ ಸಮಸ್ಯೆಗಳಾಗುತ್ತಿದೆ. ಲಾಕ್ ಡೌನ್ ನಿಂದಾಗಿ ಏನೆಲ್ಲಾ ಅನಾನುಕೂಲಗಳಾಯಿತು. ಹಾಗೇನೇ ಕುಟುಂಬದೊಳಗಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದಕ್ಕೆ ಹೇಗೆಲ್ಲಾ ಲೌಕ್ ಡೌನ್ ಸಹಕಾರಿಯಾಯ್ತು. ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಪ್ರಧಾನಿ ಮಾತನಾಡಿದ್ದರು.

ಇವುಗಳೆಲ್ಲದರ ಮಧ್ಯೆ ನಾವು ಹೆಮ್ಮೆ ಪಡುವಂತಹ ವಿಚಾರವೊಂದನ್ನು ಪ್ರಧಾನಿ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅದೇನಪ್ಪಾ ಅಂದ್ರೆ ಕರ್ನಾಟಕದ ಮಂಡ್ಯದ ರೈತರೊಬ್ಬರ ಸಾಧನೆಯ ಬಗ್ಗೆ ಮಾತನಾಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ತಮ್ಮ ಜಮೀನಿನಲ್ಲಿ 16 ಕೆರೆಗಳನ್ನು ನಿರ್ಮಿಸಿರುವ  ರೈತ ಕಾಮೇಗೌಡರ ಕಾರ್ಯವನ್ನು ಶ್ಲಾಘಿಸಿದ್ದಾರೆ, ಮಳೆ ನೀರು ಸಂರಕ್ಷಿಸಿ, ಅಂತರ್ಜಲ ಹೆಚ್ಚಿಸುತ್ತಿರುವ ನಮ್ಮ ರೈತ ಕಾಮೇಗೌಡರು ದೇಶಕ್ಕೆ ಮಾದರಿ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಇಂತಹ ರೈತರೊಬ್ಬರು ನಮ್ಮ ಕರ್ನಾಟಕದಲ್ಲಿರುವ ನಮಗೆಲ್ಲಾ ಹೆಮ್ಮೆಯ ವಿಚಾರ.

- Advertisement -

Latest News

error: Content is protected !!