Saturday, June 13, 2026
Homeಕರಾವಳಿಉಡುಪಿಉಡುಪಿ; ಅಪಘಾತದಲ್ಲಿ ಟಿಪ್ಪರ್ ಹಿಂಭಾಗಕ್ಕೆ ಸಿಲುಕಿದ ಕಾರು!:ಚಾಲಕನಿಗೆ ವಿಷಯ ತಿಳಿಯದೇ ಕಿಲೋ ಮೀಟರ್ ಗಟ್ಟಲೇ ಕಾರು...

ಉಡುಪಿ; ಅಪಘಾತದಲ್ಲಿ ಟಿಪ್ಪರ್ ಹಿಂಭಾಗಕ್ಕೆ ಸಿಲುಕಿದ ಕಾರು!:ಚಾಲಕನಿಗೆ ವಿಷಯ ತಿಳಿಯದೇ ಕಿಲೋ ಮೀಟರ್ ಗಟ್ಟಲೇ ಕಾರು ಎಳೆದೊಯ್ದ ಲಾರಿ!

- Advertisement -
- Advertisement -

ಉಡುಪಿ: ಟಿಪ್ಪರ್ ಲಾರಿಯ ಹಿಂಭಾಗಕ್ಕೆ ಸ್ಯಾಂಟ್ರೋ ಕಾರೊಂದು ಸಿಲುಕಿಕೊಂಡು ಕಾರನ್ನು ಕಿಲೋ ಮೀಟರ್ ದೂರ ಲಾರಿ ಎಳೆದೊಯ್ದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.‌ ಕಾರನ್ನು ಟಿಪ್ಪರ್ ಲಾರಿ ಎಳೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಸಾಗರದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ಯಾಂಟ್ರೋ ಕಾರು ಬೆಳ್ಮಣ್ ನಿಂದ ಬೈಕಂಪಾಡಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ನಡುವೆ ಅಪಘಾತವಾಗಿದೆ.

ಅಪಘಾತವಾಗುತ್ತಿದ್ದಂತೆಯೇ ಕಾರು ಸಿಲುಕಿರುವ ವಿಚಾರ ತಿಳಿಯದ ಟಿಪ್ಪರ್ ಚಾಲಕ ಲಾರಿಯ ವೇಗ ಹೆಚ್ಚಿಸಿದ್ದು, ಸಾರ್ವಜನಿಕರು ಹೊಡೆಯಬಹುದೆಂಬ ಆತಂಕದಿಂದ ವೇಗವಾಗಿ ಚಾಲನೆ ಮಾಡಿದ್ದಾನೆ. ಕೊನೆಗೆ ಕಾರು ಸಿಲುಕಿರುವುದನ್ನು ನೋಡಿದ ಸಾರ್ವಜನಿಕರು ಟಿಪ್ಪರ್ ಅನ್ನು ಹಿಂಬಾಲಿಸಿಕೊಂಡು ಬಂದು ಚಾಲಕನಿಗೆ ಬೈದು ನಿಲ್ಲಿಸಿದ್ದಾರೆ.

ಟಿಪ್ಪರನ್ನು ವಶಕ್ಕೆ ಪಡೆದ ಪಡುಬಿದ್ರಿ ಪೊಲೀಸರು, ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಇಬ್ಬರು ಪುರುಷರು ಗಾಯಾಳುಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!