Friday, June 5, 2026
Homeಕರಾವಳಿಮಂಗಳೂರು; ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

ಮಂಗಳೂರು; ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ

- Advertisement -
- Advertisement -

ಮಂಗಳೂರು;ಸಾಯುವುದಾಗಿ ಗೆಳೆಯರಿಗೆ ಹೇಳಿ ಮೊಬೈಲ್ ಸ್ವಿಚ್ಢ್ ಆಫ್ ಮಾಡಿ ನಾಪತ್ತೆಯಾಗಿದ್ದ ಬಂಬ್ರಾಣ ಶಾಲೆಯ ಬಳಿ ನಿವಾಸಿ ಯುವಕ‌ನ ಮೃತದೇಹ ಮಂಗಳೂರಿನ‌ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಬಂಬ್ರಾಣ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಾಜೇಶ್‌ ಕುಮಾರ್‌(28) ಮೃತ ದುರ್ದೈವಿ.ಇವರ ಮೃತದೇಹ ಮಂಗಳೂರು ನೇತ್ರಾವತಿ ನದಿಯಲ್ಲಿ ತಡರಾತ್ರಿ ಪತ್ತೆಯಾಗಿದೆ.

ಮೃತದೇಹವನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ಸಾಗಿಸಲಾಗಿದೆ.ಮನೆಯವರು ಆಸ್ಪತ್ರೆಗೆ ತೆರಳಿ ಗುರುತು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.ಅತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ‌.ಮೃತರು ತಂದೆ, ತಾಯಿ,ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ

- Advertisement -

Latest News

error: Content is protected !!