Saturday, June 6, 2026
Homeಕರಾವಳಿಪುತ್ತೂರು:ಸರ್ಕಾರಿ ದಾಖಲೆಗಳನ್ನು ಸೃಷ್ಟಿಸುವ ನಕಲಿ ಜಾಲ ಪತ್ತೆ: ನಕಲಿ ದಾಖಲೆ ಮತ್ತು ಸೀಲ್ ಗಳನ್ನು ವಶಕ್ಕೆ...

ಪುತ್ತೂರು:ಸರ್ಕಾರಿ ದಾಖಲೆಗಳನ್ನು ಸೃಷ್ಟಿಸುವ ನಕಲಿ ಜಾಲ ಪತ್ತೆ: ನಕಲಿ ದಾಖಲೆ ಮತ್ತು ಸೀಲ್ ಗಳನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಪುತ್ತೂರು: ಸರ್ಕಾರಿ ದಾಖಲೆಗಳನ್ನು ಸೃಷ್ಟಿಸುವ ನಕಲಿ ಜಾಲವೊಂದನ್ನು ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಪತ್ತೆ ಹಚ್ಚಿದ್ದು, ನಕಲಿ ದಾಖಲೆ ಮತ್ತು ಸೀಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಪುತ್ತೂರು ನಗರದ ಪಡೀಲ್ ಎಂಬಲ್ಲಿನ ವಿಶ್ವನಾಥ ಎಂಬಾತನಿಗೆ ಸೇರಿದ ಇಲೆಕ್ಟ್ರಿಕಲ್ಸ್ ಮತ್ತು ಫ್ಲಂಬಿಂಗ್ ಸೆಂಟರ್‍ನಲ್ಲಿ ಈ ಅಕ್ರಮ ಜಾಲವನ್ನು ಪತ್ತೆ ಹಚ್ಚಲಾಗಿದೆ.

ವಿಶ್ವನಾಥ ಅನುಮತಿ ಪಡೆದ ಗುತ್ತಿಗೆದಾರನಾಗಿದ್ದು, ಮೆಸ್ಕಾಂ ಗುತ್ತಿಗೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ. ವಿದ್ಯುತ್ ಸಂಪರ್ಕ ಪಡೆಯಲು ಪಂಚಾಯತ್ ಮತ್ತು ನಗರಸಭೆಯ ನಿರಪೇಕ್ಷಣಾ ಪತ್ರ(ಎನ್‍ಒಸಿ) ನೀಡಬೇಕಾಗಿದೆ. ವಿದ್ಯುತ್ ಗುತ್ತಿಗೆ ಕಾಮಗಾರಿ ನಿರ್ವಹಿಸುತ್ತಿದ್ದ ಈ ಅಂಗಡಿಯಲ್ಲಿ ಪುತ್ತೂರು ನಗರಸಭೆ, ಕಡಬ ತಾಲೂಕು ಪಂಚಾಯತ್, ಪುತ್ತೂರು ತಾಲೂಕಿನ ಎಲ್ಲಾ ಗ್ರಾಪಂಗಳ ಮೊಹರು, ಸುಳ್ಯ ಮತ್ತು ಬಂಟ್ವಾಳ ತಾಲೂಕುಗಳ ವಿವಿಧ ಗ್ರಾಮ ಪಂಚಾಯತ್‍ಗಳ ಸೀಲ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ದಾಖಲೆ ಪತ್ರಗಳಿಗೆ ನಕಲಿ ಸಹಿ ಹಾಕಿ, ಅದಕ್ಕೆ ನಕಲಿ ಸೀಲ್ ಗಳನ್ನು ಬಳಸುತ್ತಿರುವುದಾಗಿ ಆರೋಪ ವ್ಯಕ್ತವಾಗಿದೆ. ಸಾರ್ವಜನಿಕರು ದೂರು ನೀಡಿದ ಹಿನ್ನಲೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿ ನಕಲಿ ದಾಖಲೆ ಮತ್ತು ಸೀಲ್ ಗಳನ್ನು ವಶಕ್ಕೆ ಪಡೆದುಕೊಂಡಿದೆ.

- Advertisement -

Latest News

error: Content is protected !!