Friday, May 17, 2024
Homeಕರಾವಳಿಮಂಗಳೂರು: ಲೋಕಾಯಯಕ್ತ ಪೊಲೀಸರ ಭರ್ಜರಿ ಬೇಟೆ, 5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಶಾಲಾ ಸಂಚಾಲಕಿಯ ಬಂಧನ

ಮಂಗಳೂರು: ಲೋಕಾಯಯಕ್ತ ಪೊಲೀಸರ ಭರ್ಜರಿ ಬೇಟೆ, 5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಶಾಲಾ ಸಂಚಾಲಕಿಯ ಬಂಧನ

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಲೋಕಾಯಯಕ್ತ ಪೊಲೀಸರು ಇಂದು ದೊಡ್ಡ ಬೇಟೆಯಾಡಿದ್ದು. ಶಾಲಾ ಸಂಚಾಲಕಿ ತನ್ನ ಶಾಲೆಯ ನಿವೃತ್ತಿಯಾಗುತ್ತಿರುವ ಶಿಕ್ಷಕಿಯೊಬ್ಬರಿಂದ‌ ‌‌‌ಪೆಂಕ್ಷನ್ ಸಿಗುವ ದಾಖಲೆಗೆ ಸಹಿ ಹಾಕಲು 20 ಲಕ್ಷ ಹಣ ಲಂಚಕ್ಕೆ ಬೇಡಿಕೆಯಿಟ್ಟಿದ್ದು. ಈ ಬಗ್ಗೆ ಶಾಲಾ ಶಿಕ್ಷಕಿ ಲೋಕಾಯಯಕ್ತಕ್ಕೆ ದೂರು ನೀಡಿದ್ದರು‌‌. ಜುಲೈ 7 ರಂದು (ಇಂದು) 5 ಲಕ್ಷ ಹಣ ಶಾಲಾ ಸಂಚಾಲಕಿ ಜ್ಯೋತಿ ಪೂಜಾರಿ ಸ್ವೀಕಾರಿಸುತ್ತಿದ್ದಾಗ ಲೋಕಾಯಯಕ್ತ ಪೊಲೀಸರು ಬೇಟೆಯಾಡಿ ಆರೋಪಿ ಜ್ಯೋತಿ ಪೂಜಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಜ್ಯೋತಿ ಪೂಜಾರಿ

ಮಂಗಳೂರು ಹೊರವಲಯದ ಬಜಪೆ ಶ್ರೀ ನಿರಂಜನ ಸ್ವಾಮಿ ಅನುದಾನಿಕ ಹಿರಿಯ ಪ್ರಾಥಮಿಕ ಶಾಲೆ ಸುಂಕದಕಟ್ಟೆಯ ಶಾಲಾ ಸಂಚಾಲಕಿ ಜ್ಯೋತಿ ಪೂಜಾರಿ ಲೋಕಾಯಯಕ್ತ ಬಲೆಗೆ ಬಿದ್ದ ಆರೋಪಿ. ಅದೆ ಶಾಲೆಯ ಶಿಕ್ಷಕಿ ಶೋಭಾರಾಣಿ ನಿವೃತ್ತಿ ಪೆಂಕ್ಷನ್ ಹಣ ಸಿಗುವ ದಾಖಲೆಗೆ ಶಾಲಾ ಸಂಚಾಲಕರು ಸಹಿ ಮಾಡಿ ಅದನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಬೇಕಾಗಿತ್ತು. ಅದೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಸಂಚಾಲಕಿ ಜ್ಯೋತಿ ಪೂಜಾರಿಯ ಸಹಿ ಬೇಕಾಗಿತ್ತು. ಈ ದಾಖಲೆಗೆ ಸಹಿ ಹಾಕಿ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟು ಇದೀಗ ಬಂಧನವಾಗಿದ್ದಾಳೆ.

ಲೋಕಾಯಯಕ್ತ ಎಸ್ಪಿ ಸೈಮನ್ , ಡಿವೈಎಸ್ಪಿ ಚೆಲುವರಾಜ್ , ಡಿವೈಎಸ್ಪಿ ಕಲಾವತಿ, ಇನ್ಸ್‌ಪೆಕ್ಟರ್ ವಿನಾಯಕ ಬಿಲ್ಲವ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

- Advertisement -
spot_img

Latest News

error: Content is protected !!