Thursday, June 4, 2026
Homeಕರಾವಳಿಚಾರ್ಮಾಡಿ ಘಾಟ್ ನಲ್ಲಿ ಸರ್ಕಾರಿ ಬಸ್ ಗಳ ಮುಖಾಮುಖಿ ಡಿಕ್ಕಿ: ಇಬ್ಬರೂ ಡ್ರೈವರ್ ಗಳು ಮಂಗಳೂರಿನ...

ಚಾರ್ಮಾಡಿ ಘಾಟ್ ನಲ್ಲಿ ಸರ್ಕಾರಿ ಬಸ್ ಗಳ ಮುಖಾಮುಖಿ ಡಿಕ್ಕಿ: ಇಬ್ಬರೂ ಡ್ರೈವರ್ ಗಳು ಮಂಗಳೂರಿನ ಆಸ್ಪತ್ರೆಗೆ ದಾಖಲು

- Advertisement -
- Advertisement -

ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಎರಡು ಸರ್ಕಾರಿ ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಎರಡೂ ಬಸ್ ಗಳ ಡ್ರೈವರ್ ಗಳ ಕಾಲಿಗೂ ತೀವ್ರ ಗಾಯಗಳಾಗಿದ್ದು ಇಬ್ಬರನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ಘಟನೆ ನಡೆದಿದ್ದು, ಎರಡು ಬಸ್ಸುಗಳಲ್ಲಿ 80ಕ್ಕೂ ಹೆಚ್ಚು ಜನ ಪ್ರಯಾಣಿಕರು ಇದ್ದರು.

ಅಪಘಾತಕ್ಕೆ ರಸ್ತೆ ಕಾಮಗಾರಿ ಮತ್ತು ಕವಿದಿದ್ದ ದಟ್ಟ ಮಂಜು ಕಾರಣ ಎಂದು ಹೇಳಲಾಗಿದೆ.

ಅಪಘಾತದಿಂದಾಗಿ ಚಾರ್ಮಾಡಿ ಘಾಟ್ ನಲ್ಲಿ ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿ ಕೆಲವು ಪ್ರಯಾಣಿಕರು ಹತ್ತು ಕಿಲೋ ಮೀಟರ್ ದೂರ ನಡೆದು ಕೊಟ್ಟಿಗೆಹಾರ ತಲುಪಿದ್ದಾರೆ.‌

- Advertisement -

Latest News

error: Content is protected !!