Thursday, June 4, 2026
Homeಕರಾವಳಿಪುತ್ತೂರಿನಲ್ಲಿ ನೋಡ ನೋಡುತ್ತಿದ್ದಂತೆ ಪಾತಾಳಕ್ಕೆ ಕುಸಿದ ಬಾವಿ

ಪುತ್ತೂರಿನಲ್ಲಿ ನೋಡ ನೋಡುತ್ತಿದ್ದಂತೆ ಪಾತಾಳಕ್ಕೆ ಕುಸಿದ ಬಾವಿ

- Advertisement -
- Advertisement -

ಪುತ್ತೂರು; ನೋಡ ನೋಡುತ್ತಿದ್ದಂತೆ ಬಾವಿ ಪಾತಾಳಕ್ಕೆ ಕುಸಿದ ಘಟನೆ ಪುತ್ತೂರು ನಗರಸಭಾ ವ್ಯಾಪ್ತಿಯ ಬಪ್ಪಳಿಕೆ ಎಂಬಲ್ಲಿ  ನಡೆದಿದೆ. ಬಪ್ಪಳಿಗೆ ನಿವಾಸಿ ಸುಶೀಲ ಎಂಬವರಿಗೆ ಸೇರಿದ ಮನೆಯ ಬಾವಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಬಾವಿ ಕುಸಿದ ಪರಿಣಾಮ ಮನೆ ಅಪಾಯದಲ್ಲಿದ್ದು, ಸುತ್ತಮುತ್ತಲಿನ ಜನ ಆತಂಕದಲ್ಲಿದ್ದಾರೆ.

ಮನೆ ಮಂದಿಯನ್ನು ಅಗ್ನಿಶಾಮಕದಳದ ಸಿಬ್ಬಂದಿ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಅಗ್ನಿಶಾಮಕದಳ ಸಿಬ್ಬಂದಿ ಮನೆ ಸುತ್ತಲೂ ತಾತ್ಕಾಲಿಕ ತಡೆ ಹಾಕಿದ್ದಾರೆ. ಸ್ಥಳಕ್ಕೆ ನಗರಸಭಾ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!