Monday, May 20, 2024
Homeಕರಾವಳಿಬೆಳ್ತಂಗಡಿ;ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಮಂತ್ರಿ ಮಂಡಲ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ;ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಮಂತ್ರಿ ಮಂಡಲ ಉದ್ಘಾಟನಾ ಸಮಾರಂಭ

spot_img
- Advertisement -
- Advertisement -

ಬೆಳ್ತಂಗಡಿ; ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆ, ಲಾಯಿಲ ಇಲ್ಲಿನ 23-24ನೇ ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ದಿನಾಂಕ 4-7-2023 ರಂದು ಶಾಲಾ ಮುಖ್ಯೋಪಾಧ್ಯಾಯಿನಿಯವರ ಸಮ್ಮುಖದಲ್ಲಿ ರಚಿಸಲಾಯಿತು.

ಆಯ್ಕೆಯಾದ ಮಂತ್ರಿಮಂಡಲದ ಉದ್ಘಾಟನಾ ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೀತಿ ಜಾರ್ಜ್, ಸಿಸ್ಟರ್ ಜಾನ್ಸಿ ಹಾಗೂ ಸಹಶಿಕ್ಷಕ ವೃಂದದ ಸಹಯೋಗದೊಂದಿಗೆ ದೀಪ ಬೆಳಗಿಸುವುದರ ಮೂಲಕ ನೆರವೇರಿಸಲಾಯಿತು. ಶಾಲಾ ಮಂತ್ರಿಮಂಡಲಕ್ಕೆ ಆಯ್ಕೆಗೊಂಡ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅವರ ಪದನಾಮವುಳ್ಳ ಶ್ರೇಷ್ಠತಾಪಟ್ಟಿ ಹಾಗೂ ಹೂಗುಚ್ಛವನ್ನು ನೀಡಿ ಪ್ರಮಾಣವಚನವನ್ನು ಬೋಧಿಸಲಾಯಿತು. ಆ ಬಳಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೀತಿ ಜಾರ್ಜ್ ಮಾತನಾಡಿ ಶಾಲಾ ಮಂತ್ರಿಮಂಡಲ ರಚನೆಯ ಉದ್ದೇಶ, ಅದರ ಕಾರ್ಯಗಳು ಹಾಗೂ ಸಿದ್ಧಾಂತಗಳ ಬಗ್ಗೆ ತಿಳಿಸಿ ಪದಾಧಿಕಾರಿಗಳಿಗೆ ಶುಭಾಶಯವನ್ನು ಕೋರಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಸಹಶಿಕ್ಷಕಿ ಶ್ರೀಮತಿ ನಿಶಾರವರು, ಸ್ವಾಗತವನ್ನು ಶ್ರೀಮತಿ ಸಂಧ್ಯಾ ಹಾಗೂ ವಂದನಾರ್ಪಣೆಯನ್ನು ಶ್ರೀಮತಿ ಶ್ರೀಜಾರವರು ನೆರವೇರಿಸಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಹಕಾರದೊಂದಿಗೆ ಸಮಾರಂಭವು ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.

- Advertisement -
spot_img

Latest News

error: Content is protected !!