Thursday, June 4, 2026
Homeಕರಾವಳಿಬಂಟ್ವಾಳ:ಚಾಲಕ‌ನ ನಿಯಂತ್ರಣ ತಪ್ಪಿ ಕಾರು ಅಪಘಾತ; ಪುತ್ತೂರಿನ ವಿದ್ಯಾರ್ಥಿನಿ ಬಲಿ

ಬಂಟ್ವಾಳ:ಚಾಲಕ‌ನ ನಿಯಂತ್ರಣ ತಪ್ಪಿ ಕಾರು ಅಪಘಾತ; ಪುತ್ತೂರಿನ ವಿದ್ಯಾರ್ಥಿನಿ ಬಲಿ

- Advertisement -
- Advertisement -

ಬಂಟ್ವಾಳ:ಚಾಲಕ‌ನ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿ ಪುತ್ತೂರಿನ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬಂಟ್ವಾಳದ ತುಂಬೆಯಲ್ಲಿ ನಡೆದಿದೆ.ಮಂಗಳೂರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ, ಪುತ್ತೂರಿನ ಕೂರ್ನಡ್ಕ ನಿವಾಸಿ ಹನಾ (19) ಮೃತಪಟ್ಟ ವಿದ್ಯಾರ್ಥಿನಿ.

ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿಯ ಪುತ್ರಿಯಾಗಿರುವ ಹನಾ ಅಲೋಶಿಯಸ್ ಕಾಲೇಜಿನ ಬಿಬಿಎಂ ವಿದ್ಯಾರ್ಥಿನಿ.

ಹನಾ ಪುತ್ತೂರಿನಿಂದ ಮಂಗಳೂರು ಕಡೆಗೆ ಐ20 ಕಾರಿನಲ್ಲಿ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು, ಪಲ್ಟಿಯಾಗಿದೆ.ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದೆ.

- Advertisement -

Latest News

error: Content is protected !!