Thursday, June 4, 2026
Homeಅಪರಾಧಬೆಳ್ತಂಗಡಿ : ಕನ್ಯಾಡಿಯಲ್ಲಿ ಎರಡು ಕಾರು ,ಸ್ಕೂಟರ್ ನಡುವೆ ಅಪಘಾತ,ಸ್ಕೂಟರ್ ಸವಾರೆ ಗಂಭೀರ ಗಾಯ

ಬೆಳ್ತಂಗಡಿ : ಕನ್ಯಾಡಿಯಲ್ಲಿ ಎರಡು ಕಾರು ,ಸ್ಕೂಟರ್ ನಡುವೆ ಅಪಘಾತ,ಸ್ಕೂಟರ್ ಸವಾರೆ ಗಂಭೀರ ಗಾಯ

- Advertisement -
- Advertisement -

ಉಜಿರೆ: ತನ್ನ ತಾಯಿ ಮನೆ ಕನ್ಯಾಡಿಯಿಂದ ಗಂಡನ ಮನೆ ಬೆಳ್ತಂಗಡಿಗೆ ಬರುತ್ತಿರುವ ವೇಳೆ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆ ಗಂಭೀರ ಗಾಯಗೊಂಡ ಘಟನೆ ಕನ್ಯಾಡಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ  ಬೆಳ್ತಂಗಡಿ ವೆಂಕಟರಮಣ ದೇವಸ್ಥಾನದ ಸಹ ಅರ್ಚಕ ಅಮೇಯ ಭಟ್ ಎಂಬವರ  ಪತ್ನಿ ಶ್ರೀರಕ್ಷಾ ಕಿಣಿ (23) ಅವರು ತನ್ನ ತಾಯಿ ಮನೆ ಕನ್ಯಾಡಿಗೆ ತೆರಳಿದ್ದು, ಅಲ್ಲಿಂದ ಇವತ್ತು ಬೆಳಿಗ್ಗೆ ಹಿಂದಿರುಗಿ ಬೆಳ್ತಂಗಡಿಗೆ ಬರುತಿದ್ದ ವೇಳೆ ಎದುರಿನಿಂದ ಅಜಾಗರೂಕತೆಯಿಂದ ಬಂದ ಸರ್ಕಾರಿ ನೋಂದಾವಣೆ ಹೊಂದಿದ್ದ ಕಾರೊಂದು ಮತ್ತೊಂದು ಕಾರಿಗೆ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂ ಗೊಂಡು ಸವಾರೆ ಗಂಭೀರ ಗಾಯಗೊಂಡಿದ್ದಾರೆ.

ತಕ್ಷಣ ಅವರನ್ನು ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.

ಸರ್ಕಾರಿ ಕಾರು ಇದಾಗಿದ್ದು ಅಪಘಾತ ನಡೆದ ಕೂಡಲೇ ಅದರ ಚಾಲಕ ಪರಾರಿಯಾಗಿದ್ದು ,ಕುಡಿದು ವಾಹನ ಚಲಾಯಿಸಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸುತಿದ್ದಾರೆ. ಈ ಬಗ್ಗೆ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ.

- Advertisement -

Latest News

error: Content is protected !!