Saturday, May 18, 2024
Homeಕರಾವಳಿಮಂಗಳೂರು: ದಾದರ್‌-ತಿರುನಲ್ವೇಲಿ ರೈಲಿನಲ್ಲಿ ದರೋಡೆ  ನಡೆದಿದ್ಯಾ?; ಅಷ್ಟಕ್ಕೂ ಆಗಿದ್ದೇನು?

ಮಂಗಳೂರು: ದಾದರ್‌-ತಿರುನಲ್ವೇಲಿ ರೈಲಿನಲ್ಲಿ ದರೋಡೆ  ನಡೆದಿದ್ಯಾ?; ಅಷ್ಟಕ್ಕೂ ಆಗಿದ್ದೇನು?

spot_img
- Advertisement -
- Advertisement -

ಮಂಗಳೂರು: ದಾದರ್‌-ತಿರುನಲ್ವೇಲಿ ರೈಲಿನಲ್ಲಿ ಶುಕ್ರವಾರ ದರೋಡೆ  ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ರೈಲ್ವೇ ಪೊಲೀಸರೇ ಸ್ಪಷ್ಟನೆ ನೀಡಿದ್ದಾರೆ. ಅದು ತೆಂಗಿನ ಕಾಯಿ ಕೀಳುವ ಇಬ್ಬರ ನಡುವಿನ ಗಲಾಟೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಜಯಪ್ರಭಾ(28) ಮತ್ತು ಪ್ರಸಾದ್‌ (23) ಎಂಬವರನ್ನು ಬಂಧಿಸಲಾಗಿದೆ.

ಅಂದ್ಹಾಗೆ ಆರೋಪಿಗಳಿಬ್ಬರು ಕೂಡ ತೆಂಗಿನಕಾಯಿ ಕೀಳುವ ವೃತ್ತಿಯವರು. ತಮಿಳುನಾಡಿನಿಂದ ಗೋವಾಕ್ಕೆ ತೆರಳಿ ಅಲ್ಲಿ 2-3 ತಿಂಗಳ ಕಾಲ ತೆಂಗಿನಕಾಯಿ ಕೀಳುವ ಕೆಲಸ ಮುಗಿಸಿ ಮರಳಿ ಊರಿಗೆ ತೆರಳಲು ರೈಲು ಹತ್ತಿದ್ದರು. ಇಬ್ಬರು ಕೂಡ ಕುಡಿದ ಮತ್ತಿನಲ್ಲಿದ್ದರು. ಈ ವೇಳೆ ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅವರ ಬಳಿ ತೆಂಗಿನ ಕಾಯಿ ಕೀಳಲು ಉಪಯೋಗಿಸುತ್ತಿದ್ದ ಕತ್ತಿಗಳು ಕೂಡ ಇದ್ದವು. ತೋಕೂರು ಬಳಿ ಬರುತ್ತಿದ್ದಂತೆ ದಾಂಧಲೆ ಆರಂಭಿಸಿ ಕತ್ತಿಯಿಂದ ರೈಲಿನ ಕಿಟಕಿಯ ಗಾಜು, ಸೀಟು ಸೇರಿದಂತೆ ರೈಲಿನ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ. ಇದನ್ನು ಕಂಡ ಪ್ರಯಾಣಿಕರು ಇದು ದರೋಡೆ ಕೃತ್ಯವೆಂದು ಆತಂಕಗೊಂಡು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅನಂತರ ರೈಲ್ವೆ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!