Friday, June 5, 2026
Homeಕರಾವಳಿಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣ; ತಹಶೀಲ್ದಾರ್‌ ಅಜಿತ್‌ ರೈಯನ್ನು ಅಮಾನತುಗೊಳಿಸಿ ಸರ್ಕಾರ ಆದೇಶ

ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣ; ತಹಶೀಲ್ದಾರ್‌ ಅಜಿತ್‌ ರೈಯನ್ನು ಅಮಾನತುಗೊಳಿಸಿ ಸರ್ಕಾರ ಆದೇಶ

- Advertisement -
- Advertisement -

ಬೆಂಗಳೂರು:ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಪ್ರಕರಣದಡಿ ಕೆ  ಆರ್ ಪುರಂ ತಹಶೀಲ್ದಾರ್‌ ಅಜಿತ್‌ ರೈಯನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಅನುಕಂಪದ ಆಧಾರದಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಪಡೆದುಕೊಂಡಿದ್ದ ಅಜಿತ್‌ ರೈ ನಂತರ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಬಡ್ತಿ ಪಡೆದಿದ್ದ. ಪ್ರಸ್ತುತ ಕೆ.ಆರ್‌. ಪುರಂನಲ್ಲಿ ತಹಶೀಲ್ದಾರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ.

ಆದಾಯಕ್ಕಿಂತ 69% ಹೆಚ್ಚುವರಿ ಆಸ್ತಿ ಹೊಂದಿರುವ ಆರೋಪದಲ್ಲಿ ಅಜಿತ್ ರೈ ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ಪುತ್ತೂರು ಮೂಲದ ಅಜಿತ್ ರೈಗೆ ಸರಕಾರಿ ಸರ್ವೆಯರ್ ಆಗಿದ್ದ ತಂದೆಯ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ಕೆಲಸ ಸಿಕ್ಕಿತ್ತು. ಸಣ್ಣ ವಯಸ್ಸಿನಲ್ಲೆ ಉಪತಹಶೀಲ್ದಾರ್ , ತಹಶೀಲ್ದಾರ್ ಗೆ ಭಡ್ತಿ ಪಡೆದಿದ್ದ.

- Advertisement -

Latest News

error: Content is protected !!