Thursday, June 4, 2026
Homeಕರಾವಳಿಮಂಗಳೂರು; ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಬಂದು ಚಿನ್ನದ ಸರ ಎಗರಿಸಿದ ದಂಪತಿ

ಮಂಗಳೂರು; ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಬಂದು ಚಿನ್ನದ ಸರ ಎಗರಿಸಿದ ದಂಪತಿ

- Advertisement -
- Advertisement -

ಮಂಗಳೂರು; ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಬಂದು  ದಂಪತಿ  ಚಿನ್ನದ ಸರ ಎಗರಿಸಿದ ಘಟನೆ ಮಂಗಳೂರಿನ ಜಿಎಚ್‌ಎಸ್‌ ರಸ್ತೆಯಲ್ಲಿ ನಡೆದಿದೆ.

ಶುಕ್ರವಾರ ಸಂಜೆ 4.45ರ ಸುಮಾರಿಗೆ ಹಿಂದಿ ಮತ್ತು ಇಂಗ್ಲಿಷ್‌ ಮಾತನಾಡುವ ದಂಪತಿ ಚಿನ್ನದ ಅಂಗಡಿಗೆ ಬಂದು ಗುಣಮಟ್ಟ, ಹಾಲ್‌ಮಾರ್ಕ್‌, ಮೌಲ್ಯ ಇತ್ಯಾದಿಗಳ ಬಗ್ಗೆ ವಿಚಾರಿಸಿದ್ದಾರೆ.

2 ಆಭರಣಗಳ ಮೌಲ್ಯವನ್ನು ಖಚಿತಪಡಿಸಿಕೊಂಡ ಬಳಿಕ ಎಟಿಎಂನಿಂದ ಹಣ ತರುವುದಾಗಿ ಹೊರಗೆ ಹೋದವರು ತುಂಬಾ ಹೊತ್ತಾದರೂ ವಾಪಸ್‌ ಬರಲಿಲ್ಲ. ಇದರಿಂದ ಸಂಶಯಗೊಂಡ ಅಂಗಡಿಯವರು ಸ್ಟಾಕ್‌ ಪರಿಶೀಲಿಸಿದಾಗ 13.830 ಗ್ರಾಂ ತೂಕದ ಅಂದಾಜು 74,000 ರೂ. ಮೌಲ್ಯದ ಸರ ಕಳವಾಗಿರುವುದು ಗಮನಕ್ಕೆ ಬಂದಿದೆ. ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!