Saturday, June 13, 2026
Homeಕರಾವಳಿಉಡುಪಿಉಡುಪಿ: ತಲೆ ಮೇಲೆ ಮರ ಬೀಳುತ್ತಿದ್ದರಿಂದ ಜಸ್ಟ್ ಮಿಸ್ ಆದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ...

ಉಡುಪಿ: ತಲೆ ಮೇಲೆ ಮರ ಬೀಳುತ್ತಿದ್ದರಿಂದ ಜಸ್ಟ್ ಮಿಸ್ ಆದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ

- Advertisement -
- Advertisement -

ಉಡುಪಿ: ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು  ಮರವೊಂದು ತಲೆಗೆ ಉರುಳುತ್ತಿದ್ದರಿಂದ ಜಸ್ಟ್ ಮಿಸ್ ಆಗಿ ಭಾರೀ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.

ಮಳೆಗೆ ಧರೆಗುರುಳಿದ ಮರ ತೆರವು ಮಾಡುತ್ತಿದ್ದಾಗ ಮತ್ತೊಂದು ಮರ ಬಿದ್ದಿದ್ದು, ಕೂಡಲೇ ಎಚ್ಚೆತ್ತ ಶಾಸಕರು ಪಕ್ಕಕ್ಕೆ ಓಡಿ ಬಚಾವ್ ಆಗಿದ್ದಾರೆ. 

ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಇಂದು ಭಾರೀ ಮಳೆಯಾಗಿದ್ದು ಹಾಲಾಡಿ ರಸ್ತೆಯಲ್ಲಿ ಮರವೊಂದು ಉರುಳಿಬಿದ್ದಿತ್ತು. ಅದೇ ರಸ್ತೆ ಮೂಲಕ ಹೋಗುತ್ತಿದ್ದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ  ಅವರು ತಮ್ಮ ಬೆಂಬಲಿಗರೊಂದಿಗೆ ಮರ ತೆರವು ಕಾರ್ಯಕ್ಕೆ ಕೈಜೋಡಿಸಿದರು. ಈ ವೇಳೆ ಮತ್ತೊಂದು ಮರ ಧರೆಗುರುಳಿದೆ. ಮರ ಬೀಳುತ್ತಿರೋದನ್ನು ಕಂಡ ಶಾಸಕರು ಮತ್ತು ಬೆಂಬಲಿಗರು ಪಕ್ಕಕ್ಕೆ ಓಡಿ ಬಚವಾಗಿದ್ದಾರೆ.

- Advertisement -

Latest News

error: Content is protected !!