Friday, June 5, 2026
Homeತಾಜಾ ಸುದ್ದಿಅಪ್ರಾಪ್ತರ ಕೈಯಲ್ಲಿ ವಾಹನ ಕೊಡುವವರು‌ ಮಿಸ್ ಮಾಡದೇ ಈ ಸುದ್ದಿ‌ ಓದಿ...

ಅಪ್ರಾಪ್ತರ ಕೈಯಲ್ಲಿ ವಾಹನ ಕೊಡುವವರು‌ ಮಿಸ್ ಮಾಡದೇ ಈ ಸುದ್ದಿ‌ ಓದಿ…

- Advertisement -
- Advertisement -

ಬೆಂಗಳೂರು : ತಮ್ಮ ಮಕ್ಕಳು ಅಪ್ರಾಪ್ತ ವಯಸ್ಸಲ್ಲಿ‌ ಗಾಡಿ‌ ಓಡಿಸ್ತಾರೆ ಅಂತಾ ಹೇಳಿಕೊಳ್ಳೋದು ಅಂದ್ರೆ ಕೆಲವು ಪೋಷಕರಿಗೆ ಅದೇನೋ ಖುಷಿ. ಆದ್ರೆ ಅಂತಹ ಪೋಷಕರು ಈ‌ ಸುದ್ದಿಯನ್ನು ಓದಲೇ ಬೇಕು.

ಯೆಸ್.. ಅಪ್ರಾಪ್ತ ಬಾಲಕ ಬೈಕ್‌ ಚಾಲನೆ ಮಾಡಿದ ತಪ್ಪಿಗೆ ಪೋಷಕರಿಗೆ ಕೋರ್ಟ್ 20 ಸಾವಿರ ರೂಪಾಯಿ‌ ದಂಡ ವಿಧಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ದಂಡ ವಿಧಿಸಿ ತೀರ್ಥಹಳ್ಳಿ ನ್ಯಾಯಾಲಯ ತೀರ್ಪು ನೀಡಿದೆ.

ತೀರ್ಥಹಳ್ಳಿಯ ಕುಶಾವತಿ ಬಳಿ ಡಿವೈಎಸ್‌ಪಿ ಗಜಾನನ ವಾಮನ ಸುತರ ವಾಹನ ತಪಾಸಣೆ ‌ನಡೆಸುತ್ತಿದ್ದರು. ವಾಹನ ತಪಾಸಣೆ ವೇಳೆ ಹೆಲ್ಮೆಟ್ ಧರಿಸದೇ ಅಪ್ರಾಪ್ತ ಬೈಕ್ ಚಾಲನೆ ಮಾಡಿರುವುದು ಪತ್ತೆಯಾಗಿದೆ.ಅಪ್ರಾಪ್ತ ಬಾಲಕ ಬೈಕ್‌ ಚಾಲನೆ ಮಾಡಿದ್ದಷ್ಟೇ ಅಲ್ಲ, ಹೆಲ್ಮೆಟ್‌ ಧರಿಸದೇ ಬೈಕ್‌ ಚಲಾಯಿಸಿ ನಿಯಮ ಉಲ್ಲಂಘಿಸಿದ್ದ.

ಪರಿಶೀಲನೆ ವೇಳೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕಳ್ಳಿಗದ್ದೆ ಗ್ರಾಮದ ಪ್ರಮೋದ್ ಎಂಬವರಿಗೆ ಸೇರಿದ ಬೈಕ್ ಆಗಿದ್ದು, ಪೊಲೀಸರು ಘಟನೆ ಬಗ್ಗೆ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಾಧೀಶರು ವಿಚಾರಣೆ ನಡೆಸಿದ್ದರು. ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಪೋಷಕರಿಗೆ 20 ಸಾವಿರ ದಂಡ ವಿಧಿಸಿ ನೀಡಿದ್ದಾರೆ.

- Advertisement -

Latest News

error: Content is protected !!