Monday, June 8, 2026
Homeಕರಾವಳಿಸುಳ್ಯ :ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು

ಸುಳ್ಯ :ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು

- Advertisement -
- Advertisement -

ಸುಳ್ಯ :ಕಳೆದ ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬರು ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ರವಿ ಜಯನಗರ(48) ಮೃತ ದುರ್ದೈವಿ.

ರವಿ ಜಯನಗರ ವರ್ಷದ ಹಿಂದೆ ಗೋಡೆಗೆ ಕಲ್ಲು ಕಟ್ಟುತ್ತಿದ್ದಾಗ ಮೇಲಿಂದ ಕೆಳಕ್ಕೆ ಬಿದ್ದು ಸೊಂಟದ ಮೂಳೆ ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಡೆಯಲೂ ಸಾಧ್ಯವಾಗದೇ ಅವರ ಕುಟುಂಬದ ನಿರ್ವಹಣೆ ಕಷ್ಟವಾಗಿತ್ತು.ಆಸ್ಪತ್ರೆಯಲ್ಲಿದ್ದ ರವಿ ಅವರನ್ನು ಪತ್ನಿ ಹಗಲೆಲ್ಲಾ ಆರೈಕೆ ಮಾಡಿ ರಾತ್ರಿ ಹೊಟೇಲ್ ಗೆ ಕೆಲಸಕ್ಕೆ ಹೋಗಿ ಜೀವನ ನಡೆಸುತ್ತಿದ್ದರು. ಇದೀಗ ಅವರು ಸಾವನ್ನಪ್ಪಿದ್ದಾರೆ, ಮೃತರು ಪುತ್ರ, ಪುತ್ರಿ ಹಾಗೂ ಪತ್ನಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!