Saturday, June 6, 2026
Homeಕೊಡಗುಕೊಡಗು; ಬುಲೆಟ್ ಮತ್ತು ಸ್ಕೂಟಿ ನಡುವೆ ಅಪಘಾತ; ಕಾಲೇಜು ವಿದ್ಯಾರ್ಥಿನಿ ಸಾವು

ಕೊಡಗು; ಬುಲೆಟ್ ಮತ್ತು ಸ್ಕೂಟಿ ನಡುವೆ ಅಪಘಾತ; ಕಾಲೇಜು ವಿದ್ಯಾರ್ಥಿನಿ ಸಾವು

- Advertisement -
- Advertisement -

ಕೊಡಗು; ಬುಲೆಟ್ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ.ಇಂದಿರಾ ಬಡಾವಣೆ ನಿವಾಸಿ ಪೂಣಚ್ಚ ಎಂಬುವವರ ಪುತ್ರಿ ಭಾವನ (21) ಮೃತ ಯುವತಿ.

ಭಾವನಾ ಸ್ಕೂಟಿಯಲ್ಲಿ ಗೆಳತಿಯೊಂದಿಗೆಹೋಗುತ್ತಿದ್ದಾಗ ಬುಲೆಟ್ ಸ್ಕೂಟಿಗೆ ಡಿಕ್ಕಿ ಹೊಡಿದಿದೆ.ಘಟನೆಯಲ್ಲಿ ಕೊಪ್ಪದ ಬಳಿಯ ಮರೂರು ನಿವಾಸಿ, ವಿದ್ಯಾರ್ಥಿನಿ ನಿಸರ್ಗ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾವನಾ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕುಶಾಲನಗರಕ್ಕೆ ಬಂದಿದ್ದ ಈಕೆ ಸ್ನೇಹಿತೆ ನಿಸರ್ಗಳೊಂದಿಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಬೈಕ್ ಡಿಕ್ಕಿಯಾಗಿದೆ.ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!