Sunday, June 14, 2026
Homeಕರಾವಳಿಸುರತ್ಕಲ್: ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ ವ್ಯಕ್ತಿಗೆ ಚೂರಿ ಇರಿತ

ಸುರತ್ಕಲ್: ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ ವ್ಯಕ್ತಿಗೆ ಚೂರಿ ಇರಿತ

- Advertisement -
- Advertisement -

ಸುರತ್ಕಲ್:‌ ರಾತ್ರಿ ಮಸೀದಿಯ ಲೈಟ್‌ ಆಫ್‌ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಚೂರಿ ಇರಿತದಿಂದ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್‌ನ ಜನತಾ ಕಾಲೋನಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಮೊಹಮ್ಮದ್‌ ಶಾಫಿ ಚೂರಿತ ಇರಿತಕ್ಕೊಳಗಾದ ಯುವಕ. ತ್ವಾಹೀರ್‌ ಎಂಬಾತನೇ ಮೊಹಮ್ಮದ್‌ ಶಾಫಿಗೆ ಚೂರಿ ಇರಿದ ಆರೋಪಿ. ಇಬ್ಬರ ನಡುವೆ ನಿನ್ನೆ ರಾತ್ರಿ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿ ಶಾಫಿಗೆ ತ್ವಾಹೀರ್‌ ಚೂರಿ ಇರಿದಿದ್ದಾನೆ. ಶಾಫಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ಸಂಬಂಧ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!