Saturday, June 13, 2026
Homeಅಪರಾಧಬೆಳ್ತಂಗಡಿ : ಧರ್ಮಸ್ಥಳದಲ್ಲಿ ಬೈಕ್-ಸ್ಕೂಟರ್ ಅಪಘಾತ, ಮಾನವೀಯತೆ ಮೆರೆದ ಬೆಳ್ತಂಗಡಿ ಸಂಚಾರಿ ಪೊಲೀಸರು

ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಬೈಕ್-ಸ್ಕೂಟರ್ ಅಪಘಾತ, ಮಾನವೀಯತೆ ಮೆರೆದ ಬೆಳ್ತಂಗಡಿ ಸಂಚಾರಿ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಹತ್ತಿರದ ಕಲ್ಲೇರಿಯಲ್ಲಿ ಬೈಕ್ ಮತ್ತು ಆಕ್ಟಿವಾ ಅಪಘಾತವಾಗಿದ್ದು, ಇದರಲ್ಲಿ ಬೈಕ್ ಸವಾರ ಗಾಯಗೊಂಡ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸರು ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ನಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಲ್ಲಿ ಮಾನವೀಯತೆ ಮೆರೆದಿದ್ದಾರೆ.

ಜೂನ್‌.4 ರಂದು ಭಾನುವಾರ ಬೆಳಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಬೆಂಗಳೂರಿನಿಂದ ಬೈಕ್ ನಲ್ಲಿ ಬರುತ್ತಿದ್ದಾಗ ಧರ್ಮಸ್ಥಳ ಬಳಿಯ ಕಲ್ಲೇರಿಯಲ್ಲಿ ಅಭಿಲಾಷ್(23) ಎಂಬಾತನ ಬೈಕ್ ಎದುರಿನಿಂದ ಬರುತ್ತಿದ್ದ ಸ್ಕೂಟರ್ ನಡುವೆ ಅಪಘಾತ ನಡೆದಿದ್ದು, ಈ ವೇಳೆ ಬೈಕ್ ನಿಂದ ಬಿದ್ದ ಅಭಿಲಾಷ್ ಕೈಗೆ ಗಂಭೀರ ಗಾಯಗೊಂಡು ರಸ್ತೆಯಲ್ಲಿ ಬಿದ್ದು ಓದ್ದಾಡುತ್ತಿದ್ದ.

ಈ ವೇಳೆ ಅದೇ ರಸ್ತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಹರಿಪ್ರಸಾದ್ ಮತ್ತು ಸಿಬ್ಬಂದಿ ಸುನಿಲ್ ರವರು ತಕ್ಷಣ ಯುವಕನನ್ನು ಉಪಚರಿಸಿ ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆಯನ್ನು ನೀಡಿ ನಂತರ ಉಜಿರೆ ಆಸ್ಪತ್ರೆಗೆ ಆಟೋ ರಿಕ್ಷಾದಲ್ಲಿ ದಾಖಲಿಸುವಲ್ಲಿ ಸಹಕರಿಸಿದ್ದಾರೆ.

- Advertisement -

Latest News

error: Content is protected !!