Saturday, June 6, 2026
Homeಕರಾವಳಿಮಂಗಳೂರು, ಜೈಲಿಗೆ ಗಾಂಜಾ ಪೂರೈಕೆಗೆ ಯತ್ನ,ಆರೋಪಿಯ ಬಂಧನ

ಮಂಗಳೂರು, ಜೈಲಿಗೆ ಗಾಂಜಾ ಪೂರೈಕೆಗೆ ಯತ್ನ,ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ಜಿಲ್ಲಾ ಕಾರಾಗೃಹಕ್ಕೆ ಗಾಂಜಾ ಪೂರೈಕೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೈಲಿನಲ್ಲಿರುವ  ವಿಚಾರಣಾಧೀನ ಕೈದಿ ಮಹೇಂದ್ರ ಶೆಟ್ಟಿ ಎಂಬವರನ್ನು ಭೇಟಿಯಾಗಲು  ಬಂದಿದ್ದ ಅನಿಶ್ ವಾಟ್ಸನ್ ಡಿಸೋಜ ಗಾಂಜಾ ಪೂರೈಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಮೇ 17ರಂದು ಸಂಜೆ 5ಕ್ಕೆ ಮಹೇಂದ್ರ ಶೆಟ್ಟಿಯನ್ನು ಭೇಟಿಯಾಗಲು ಬಂದಿದ್ದ ಆರೋಪಿ ಅನಿಶ್ ವಾಟ್ಸನ್ ಡಿಸೋಜ ಬಟ್ಟೆ ಹಾಗೂ ಕಪ್ಪು ಮತ್ತು ಬೂದು ಬಣ್ಣ ಮಿಶ್ರಿತ ಚಪ್ಪಲಿಗಳನ್ನು ತಂದಿದ್ದಯ. ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಇದನ್ನು ಪರಿಶೀಲಿಸುವ ಸಂದರ್ಭ ಚಪ್ಪಲಿಗಳಲ್ಲಿ ಹೆಚ್ಚುವರಿಯಾಗಿ ಹೊಲಿಗೆ ಹಾಕಿರುವ ರೀತಿಯಲ್ಲಿ ಕಂಡು ಬಂತು. ಸಂಶಯದಿಂದ ಹೊಲಿಗೆ ಬಿಚ್ಚಿ ಪರಿಶೀಲಿಸಿದಾಗ ಒಂದು ಚಪ್ಪಲಿಯಲ್ಲಿ ಪ್ಲಾಸ್ಟಿಕ್ ಕವರ್‌ನ ಒಳಗೆ ಗಾಂಜಾ ಕಂಡು ಬಂದಿದೆ. ತಕ್ಷಣ ವಶಕ್ಕೆ ಪಡೆದು ಬರ್ಕೆ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!