Thursday, June 4, 2026
Homeಕರಾವಳಿಮನೆ ಮನೆಗೆ ತೆರಳಿ ಮತಯಾಚಿಸಿದ ಶಾಸಕ ಹರೀಶ್‌ ಪೂಂಜ

ಮನೆ ಮನೆಗೆ ತೆರಳಿ ಮತಯಾಚಿಸಿದ ಶಾಸಕ ಹರೀಶ್‌ ಪೂಂಜ

- Advertisement -
- Advertisement -

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜ ಅವರು ಇಂದು ಮನೆ ಮನೆ ಭೇಟಿ ನೀಡಿ ಮತಯಾಚಿಸಿದ್ರು.

ಪುದುವೆಟ್ಟು ನೆರಿಯ, ಚಿಬಿದ್ರೆ, ತೊಟತ್ತಾಡಿ, ಚಾರ್ಮಾಡಿ, ಮುಂಡಾಜೆ, ಕಡಿರುದ್ಯಾವರ, ಮಲವಂತಿಗೆ, ಮಿತ್ತಬಾಗಿಲು, ಇಂದಬೆಟ್ಟು ಗ್ರಾಮಗಳ ಮನೆ ಭೇಟಿ ನಡೆಸಿ, ಮತ ಯಾಚಿಸಿದರು. ಕಾರ್ಯಕರ್ತರೊಂದಿಗೆ ಉತ್ಸಾಹದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡ ಶಾಸಕರು ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ತನ್ನನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಮತದಾರರಲ್ಲಿ ಕೋರಿಕೊಂಡರು.

ಮನೆ ಭೇಟಿಯ ಸಂದರ್ಭದಲ್ಲಿ ಶಾಸಕರೊಂದಿಗೆ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ, ಸ್ಥಳೀಯ ಜನಪ್ರತಿನಿಧಿಗಳು, ಮಹಾ ಶಕ್ತಿ ಕೇಂದ್ರ, ಶಕ್ತಿ ಕೇಂದ್ರಗಳ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!